ಚೀನಾದಲ್ಲಿ ವೈರಸ್‌ಗಳು ಕಾಣಿಸಿಕೊಂಡಿವೆ ಎಂಬ ಸುದ್ದಿ ಕೇಳಿದ್ರೆ ಸಾಕು ಇಡೀ ಜಗತ್ತು ಬೆಚ್ಚಿ ಬೀಳಲಿದೆ. ಅದ್ರಲ್ಲೂ ಕೋವಿಡ್ ವೈರಸ್‌ನಿಂದ ಉಂಟಾದ ಹಾನಿ ಇಡೀ ವಿಶ್ವವನ್ನೇ ನಡುಗಿಸಿತ್ತು. ಚೀನಾದ ಲ್ಯಾಬ್‌ನಲ್ಲಿ ಮೊದಲು ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದ್ದ ಕೋವಿಡ್ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಪ್ರಾಣ ಹಾನಿಗೆ ಕಾರಣವಾಗಿತ್ತು. ಇದರಿಂದ ಇಡಿ ವಿಶ್ವದ ಆರ್ಥಿಕತೆ ಕುಸಿದಿತ್ತು. ಹೀಗಾಗಿ ಚೀನಾದಲ್ಲಿ ವೈರಸ್ ಪತ್ತೆಯಾಗುವುದು ಅಂದ್ರೆ ನಡುಕ ಹುಟ್ಟಿಸುತ್ತೆ.
ಸದ್ಯ ಈಗ ಚೀನಾದಿಂದ ಮತ್ತೊಂದು ದೊಡ್ಡ ಹಾಗೆ ಬೆಚ್ಚಿ ಬೀಳಿಸುವಂತಹ ಸುದ್ದಿಯೊಂದು ಹೊರಬಿದ್ದಿದೆ. ಚೀನಾದಲ್ಲಿ ಭೂಮಿ ಮೇಲೆ ಇದುವರೆಗೂ ಕಾಣಿಸಿಕೊಳ್ಳದ ಹಾಗೆ ವಿಚಿತ್ರ ಸ್ವಭಾವದ ಬ್ಯಾಕ್ಟೀರಿಯಾ ಪತ್ತೆಯಾಗಿದೆಯಂತೆ. ಚೀನಾದ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿರುವ ವಿಜ್ಞಾನಿಗಳು, ಭೂಮಿಯ ಮೇಲೆ ಇದುವರೆಗೆ ನೋಡಿರದ ಹೊಸ ಬ್ಯಾಕ್ಟೀರಿಯಾ ತಳಿಯನ್ನು ಕಂಡುಹಿಡಿದಿದ್ದಾರೆ.
ಈ ಬ್ಯಾಕ್ಟೀರಿಯಾಗೆ ನಿಯಾಲಿಯಾ ಟಿಯಾಂಗಾಂಗೆನ್ಸಿಸ್ ಎಂದು ಹೆಸರಿಡಲಾಗಿದೆ. ಬಾಹ್ಯಾಕಾಶ ನಿಲ್ದಾಣದ ಕ್ಯಾಬಿನ್ ಪ್ರದೇಶದಲ್ಲಿ ಬ್ಯಾಕ್ಟೀರಿಯಾ ಕಂಡುಬಂದಿದೆ ಮತ್ತು ಇದು ಬಾಹ್ಯಾಕಾಶದ ತೀವ್ರ ಪರಿಸ್ಥಿತಿಗಳಲ್ಲಿಯೂ ಬದುಕುಳಿಯಲಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಈ ಬ್ಯಾಕ್ಟೀರಿಯಾ ಭೂಮಿ ಮೇಲೆ ಈವರೆಗೂ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಹಾಗೆ ಇದು ಬಾಹ್ಯಾಕಾಶದಂತಹ ಪರಿಸ್ಥಿತಿಯಲ್ಲೇ ಬದುಕುಳಿಯುವ ಸಾಧ್ಯತೆ ಹೆಚ್ಚಿರುವುದರಿಂದ ಅದು ಭೂಮಿಯ ಮೇಲೂ ಬದುಕುಳಿಯಬಹುದು ಎಂದು ಅಂದಾಜಿಸಲಾಗಿದೆ. ಹಾಗೆ ಭೂಮಿಯಲ್ಲಿ ಹೇಗೆ ವರ್ತಿಸಲಿದೆ ಎಂಬ ಕಳವಳದಿಂದಾಗಿ ಗರಿಷ್ಠ ಎಚ್ಚರಿಕೆ ಕೂಡ ನೀಡಲಾಗಿದೆ. ಈ ಬ್ಯಾಕ್ಟೀರಿಯಾವು ಬಾಹ್ಯಾಕಾಶ ವಿಕಿರಣ ಮತ್ತು ಬಾಹ್ಯಾಕಾಶದ ಒತ್ತಡ, ನಿಭಾಯಿಸುವ ವೈಶಿಷ್ಟ್ಯಗಳ ಅಭಿವೃದ್ಧಿಪಡಿಸಿವೆ ಎಂದು ಅವರು ಹೇಳಿದ್ದಾರೆ.
ಇಂಟರ್ನ್ಯಾಷನಲ್ ಜರ್ನಲ್ ಆಫ್ ಸಿಸ್ಟಮ್ಯಾಟಿಕ್ ಅಂಡ್ ಎವಲ್ಯೂಷನರಿ ಮೈಕ್ರೋಬಯಾಲಜಿಯಲ್ಲಿ ಪ್ರಕಟವಾದ ಸಂಶೋಧನೆಗಳು, ದೀರ್ಘಾವಧಿಯ ಬಾಹ್ಯಾಕಾಶ ಕಾರ್ಯಾಚರಣೆಗಳ ಸಮಯದಲ್ಲಿ ಸೂಕ್ಷ್ಮಜೀವಿಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ.
ಹಾಗೆ ಈ ಬ್ಯಾಕ್ಟೀರಿಯಾವು ಕಠಿಣ ಪರಿಸ್ಥಿತಿಯಲ್ಲಿ ಹೇಗೆ ವರ್ತಿಸಲಿವೆ. ಹೇಗೆ ಕಠಿಣ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲಿವೆ ಎಂಬುದನ್ನು ಅಧ್ಯಯನ ಮಾಡುವುದರಿಂದ ಭೂಮಿ ಮೇಲಿನ ಹೊಸ ಪ್ರಗತಿಗೆ ಇದು ಕಾರಣವಾಗಬಹುದು. ಅದರಲ್ಲೂ ಹಲವು ಬ್ಯಾಕ್ಟೀರಿಯಾ ಕುರಿತಾದ ಹಿಂದಿನ ಅಧ್ಯಯನಗಳಲ್ಲಿ ಹಾಗೂ ನೂತನ ರೀತಿಯ ಅಧ್ಯಯನಗಳಿಗೆ ಬೇಕಾದ ಪೂರಕ ಅಂಶಗಳಲ್ಲಿ ಪ್ರಗತಿಗೆ ಇದು ಕಾರಣವಾಗಲಿದೆ ಎನ್ನಲಾಗುತ್ತಿದೆ.
ಈ ಹೊಸ ಬ್ಯಾಕ್ಟೀರಿಯಾವು ಟಿಯಾಂಗಾಂಗ್ ನಿಲ್ದಾಣದಲ್ಲಿರುವ ಗಗನಯಾತ್ರಿಗಳ ಆರೋಗ್ಯಕ್ಕೆ ಯಾವುದೇ ಅಪಾಯ ಉಂಟುಮಾಡುತ್ತದೆಯೇ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಮುಂಜಾಗೃತ ಕೃಮವನ್ನು ತೆಗೆದುಕೊಳ್ಳಲಾಗಿದೆಯಂತೆ. ಬಾಹ್ಯಾಕಾಶ ಕೇಂದ್ರಗಳಲ್ಲಿ ಯಾವ ಬ್ಯಾಕ್ಟೀರಿಯಾಗಳು ಬದುಕುಳಿಯುತ್ತವೆ, ಅವುಗಳ ರಚನೆಗಳು ಹೇಗೆ ನೆರವಾಗುತ್ತವೆ ಎಂಬುದನ್ನು ಪತ್ತೆ ಮಾಡಲು ಇದು ನೆರವಾಗಲಿದೆ ಎಂದಿದೆ.
ನಿಯಾಲಿಯಾ ಟಿಯಾಂಗಾಂಗೆನ್ಸಿಸ್ ಬಾಹ್ಯಾಕಾಶ ನಿಲ್ದಾಣದಲ್ಲಿ ಪತ್ತೆಯಾಗಿರುವ ಹಾಗೆ ಬಹಳ ಕಾಲ ಬದುಕುಳಿಯುವಷ್ಟು ಬಲಶಾಲಿಯಾದ ಮೊದಲ ವೈರಸ್ ಎನ್ನಲಾಗಿದೆ. ಇದು ಭೂಮಿ ಮೇಲೆ ಕಂಡುಬರುವ ಅದರಲ್ಲೂ ನೀರು, ಮಣ್ಣು, ಆಹಾರದಲ್ಲಿ ಕಂಡುಬರುವ ರಾಡ್ ಆಕಾರದ ಬ್ಯಾಕ್ಟೀರಿಯಾವನ್ನೇ ಹೋಲುತ್ತದೆ ಎಂದು ಹೇಳಲಾಗಿದೆ. ಆದರೆ ಇದು ಬಾಹ್ಯಾಕಾಶದಲ್ಲೂ ಬದುಕುಳಿಯುವಂತಹ ಲಕ್ಷಣಗಳನ್ನು ಅಭಿವೃದ್ಧಿ ಪಡಿಸಿದೆ.
ಪ್ರಾಥಮಿಕ ಹಂತದಲ್ಲಿ ಈ ಬ್ಯಾಕ್ಟೀರಿಯಾ ಮಾನವರ ಶ್ವಾಸಕೋಶ, ಮೂತ್ರಪಿಂಡ, ಯಕೃತ್ತು, ಸೇರಿ ಇತರ ಅಂಗಗಳಿಗೆ ಹಾನಿ ಮಾಡಬಹುದು ಎಂದು ಅಂದಾಜಿಸಲಾಗಿದೆ. ಹಾಗೆ ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಲ್ಲಿ ಈ ಬ್ಯಾಕ್ಟೀರಿಯಾ ಕುರಿತಾದ ಮುನ್ನೆಚ್ಚರಿಕೆ ಹಾಗೂ ಆರೋಗ್ಯ ಸಂಬಂಧಿ ಸುಸ್ಥಿರ ಆಯಾಮಗಳನ್ನು ಜಾರಿ ಮಾಡಲು ಇದು ಸಹಕಾರಿಯಾಗಲಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.





