ತಿರುವನಂತಪುರಂ: ಹಲವು ಕುಟುಂಬ ಸಂಬಂಧಗಳು ಹಾಳಾಗಲು ಪ್ರಮುಖ ಕಾರಣ ಹೆಚ್ಚುತ್ತಿರುವ ವಿವಾಹೇತರ ಸಂಬಂಧಗಳು ಎಂದು ಕೇರಳ ಮಹಿಳಾ ಆಯೋಗದ ಅಧ್ಯಕ್ಷೆ ಪಿ. ಸತಿದೇವಿ ಹೇಳುತ್ತಾರೆ.
ವಿವಾಹೇತರ ಸಂಬಂಧಗಳ ಮೂಲಕ ಹಣಕಾಸಿನ ವಹಿವಾಟುಗಳು ಮತ್ತು ಮದುವೆಯ ಭರವಸೆ ನೀಡಿ ಸುಲಿಗೆ ಮಾಡುವ ಘಟನೆಗಳು ಸಹ ಇವೆ. ಮಹಿಳೆಯರ ನಡುವಿನ ಹಣಕಾಸಿನ ವಹಿವಾಟುಗಳಲ್ಲಿ ವಂಚನೆಗಳು ಸಹ ಸಂಭವಿಸುತ್ತವೆ. ಕೆಲಸದ ಸ್ಥಳಗಳಲ್ಲಿ ಆಂತರಿಕ ಸಮಿತಿಗಳು ಕಡ್ಡಾಯವಾಗಿದ್ದರೂ, ಅನೇಕ ಸಂಸ್ಥೆಗಳಲ್ಲಿ ಸಮಿತಿಗಳನ್ನು ರಚಿಸಲಾಗಿಲ್ಲ. ಕೆಲವು ಸಂಸ್ಥೆಗಳು ಸಮಿತಿಗಳನ್ನು ರಚಿಸಿದ್ದೇವೆ ಎಂದು ಹೇಳಿಕೊಂಡರೂ, ಅಲ್ಲಿನ ಉದ್ಯೋಗಿಗಳಿಗೆ ತಮ್ಮ ಸಂಸ್ಥೆಯಲ್ಲಿ ಸಮಿತಿ ಇದೆ ಎಂಬ ಅರಿವೂ ಇರುವುದಿಲ್ಲ. ಆಂತರಿಕ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದ ಉದ್ಯೋಗ ಸಂಸ್ಥೆಗಳಲ್ಲಿ ಮಾಧ್ಯಮ ಸಂಸ್ಥೆಗಳು ಸೇರಿವೆ ಎಂದು ಸತಿದೇವಿ ಹೇಳಿರುವರು.





