ಪತ್ತನಂತಿಟ್ಟ: ಶಬರಿಮಲೆ ದೇವಸ್ಥಾನ ಮಿಥುನಮಾಸದ ಪೂಜೆಗಳಿಗಾಗಿ ಶನಿವಾರ(ಜೂ.14)ತೆರೆಯಲಿದೆ. ಸಂಜೆ 5 ಗಂಟೆಗೆ, ತಂತ್ರಿ ಕಂಠಾರರ್ ರಾಜೀವರ ಸಮ್ಮುಖದಲ್ಲಿ ಮೇಲ್ಶಾಂತಿ ಅರುಣ್‍ಕುಮಾರ್ ನಂಬೂದಿರಿ ದೇವಾಲಯವನ್ನು ತೆರೆದು ದೀಪ ಬೆಳಗಿಸುವರು.
ನಂತರ, 18 ಮೆಟ್ಟಲುಗಳ ಕೆಳಗಿನ ಯಜ್ಞಕುಂಡದಲ್ಲಿ ಅಗ್ನಿ ಬೆಳಗಿಸುವರು. ಮಿಧುನಮಾಸದ 1 ರಂದು (ಜೂ15) ಬೆಳಿಗ್ಗೆ 5ಕ್ಕೆ ದೇವಾಲಯ ತೆರೆಯುತ್ತದೆ. ಅಂದಿನಿಂದ, ಪ್ರತಿದಿನ ಗಣಪತಿ ಹೋಮ, ಉಷಃ ಪೂಜೆ, ತುಪ್ಪಾಭಿಷೇಕ, ಮಧ್ಯಾಹ್ನ ಪೂಜೆ, ದೀಪಾರಾಧನೆ ಮತ್ತು ಅತ್ತಾಳ ಪೂಜೆ ನಡೆಯಲಿದೆ. ಇವುಗಳ ಜೊತೆಗೆ, ಪ್ರತಿದಿನ ದೀಪಾರಾಧನೆಯ ನಂತರ, 18 ನೇ ಮೆಟ್ಟಲಲ್ಲಿ ಪಡಿ ಪೂಜೆಯೂ ನಡೆಯಲಿದೆ.
ಮಿಧುನಮಾಸದ ಪೂಜೆಗಳು ಜೂನ್ 19 ರಂದು ರಾತ್ರಿ 10 ಗಂಟೆಗೆ ಪೂರ್ಣಗೊಂಡು ದೇವಾಲಯವನ್ನು ಮುಚ್ಚಲಾಗುತ್ತದೆ. ಭಕ್ತರಿಗೆ ಸುರಕ್ಷಿತ ಮತ್ತು ಅನುಕೂಲಕರ ದರ್ಶನ ಒದಗಿಸಲು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ಸರ್ಕಾರ ಜಂಟಿಯಾಗಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿವೆ.





