ದೀವೀ ಹಲಸು ಅಥವಾ ದೀಗುಜ್ಜೆ ಔಷಧೀಯ ಸಸ್ಯವಾಗಿದೆ. ಇದು ಮಧುಮೇಹ, ಚರ್ಮ ರೋಗಗಳು, ಅತಿಸಾರ, ಆಸ್ತಮಾ ಮತ್ತು ಸಂಧಿವಾತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಜೊತೆಗೆ, ಇದು ಫೈಬರ್, ವಿಟಮಿನ್‍ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ.
ದೀವೀ ಹಲಸು ಮುಖ್ಯ ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ:
ಮಧುಮೇಹವನ್ನು ನಿಯಂತ್ರಿಸುತ್ತದೆ
ಪೈಬರ್‍ನಲ್ಲಿ ಸಮೃದ್ಧವಾಗಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಇದು ಕರಗುವ ಮತ್ತು ಕರಗದ ನಾರನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ದೀವೀ ಹಲಸು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಚರ್ಮ ರೋಗಗಳನ್ನು ಶಮನಗೊಳಿಸುತ್ತದೆ
ಒಣಗಿದ ಮತ್ತು ಪುಡಿಮಾಡಿದ ದೀವೀ ಹಲಸಿನ ಎಲೆಗಳನ್ನು ಹಚ್ಚುವುದರಿಂದ ಚರ್ಮ ರೋಗಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.
ಆಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ
ದೀವೀ ಹಲಸು ಆಸ್ತಮಾದ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ತಡೆಯಲು ಸಹಾಯ ಮಾಡುತ್ತದೆ.
ಕಿವಿ ನೋವು ಕಡಿಮೆಯಾಗುತ್ತದೆ
ದೀವೀ ಹಲಸು ಎಲೆಗಳ ರಸವನ್ನು ತೆಗೆದು ಕಿವಿಯಲ್ಲಿ ಸುರಿಯುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ.
ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ
ಆಮ್ಲೀಯತೆ ಮತ್ತು ಎದೆಯುರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ
ಅನೇಕ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ದೀವೀ ಹಲಸು ವಿವಿಧ ಖಾದ್ಯಗಳಲ್ಲಿ ಸೇರಿಸಬಹುದು. ಇದನ್ನು ಸಾಮಾನ್ಯವಾಗಿ ಸಾಂಬಾರ್, ಪಲ್ಯ, ಮೇಲೋಗರವಾಗಿ ನಾವು ಬಳಸುತ್ತೇವೆ.
ದೀವೀ ಹಲಸಿನ ಮೇಲ್ಕಾಣಿಸಿದ ಪ್ರಯೋಜನಗಳನ್ನು ಪಡೆಯಲು ಆಯುರ್ವೇದ ವೈದ್ಯರ ಅಥವಾ ಹಿರಿಯ ಅನುಭವಿಗಳ ಸಹಾಯವನ್ನು ಪಡೆಯಬೇಕು.


