ನವದೆಹಲಿ : ಖ್ಯಾತ ಪತ್ರಕರ್ತ ಆರ್ನಬ್ ಗೋಸ್ವಾಮಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಭಾರತವನ್ನು ನಿಂದಿಸಲು ಅರ್ನಬ್ ಗೋಸ್ವಾಮಿ ಪಾಕಿಸ್ತಾನದ ಪ್ಯಾನೆಲಿಸ್ಟ್‌ಗಳಿಗೆ ಹಣ ನೀಡುತ್ತಿದ್ದರು ಎಂದು ಮತ್ತೊಬ್ಬ ಪತ್ರಕರ್ತ ಹಾಮಿದ್ ಮೀರ್ ಆರೋಪಿಸಿದ್ದಾರೆ.
TRP ರೇಟಿಂಗ್ಸ್ ಹೆಚ್ಚಿಸಲು ಆರ್ನಬ್ ಸಾಕಷ್ಟು ಅನ್ಯ ಮಾರ್ಗಗಳನ್ನು ಅನುಸರಿಸಿದ್ದಾರೆ. 20-22 ವರ್ಷಗಳಿಂದ ಆರ್ನಬ್ ಬಗ್ಗೆ ಗೊತ್ತಿದ್ದು, NDTV, ಟೈಮ್ಸ್ ನೌ ನಲ್ಲಿ ಕೆಲಸ ಮಾಡ್ತಿದ್ದ ವೇಳೆ ಅವರು ನನ್ನನ್ನು ಭಾಯ್ ಎನ್ನುತ್ತಿದ್ದರು. ರಿ ಪಬ್ಲಿಕ್ ಶುರುವಾದ ಬಳಿಕ ಅರ್ನಬ್ ಸಂಪೂರ್ಣ ಬದಲಾವಣೆ ಆದರು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್ ರಿಪಬ್ಲಿಕ್ ಟಿವಿಯಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ನನಗೆ ತಿಳಿಯಿತು.ಅರ್ನಬ್ ಪಾಕಿಸ್ತಾನದ ಬುದ್ಧಿಜೀವಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಚರ್ಚೆಗೆ ಆಹ್ವಾನಿಸುತ್ತಾರೆ, ಅವರಿಗೆ ಹಣ ನೀಡುತ್ತಾರೆ ಮತ್ತು ಲೈವ್ ಕಾರ್ಯಕ್ರಮದಲ್ಲಿ ಭಾರತವನ್ನುನಿಂದಿಸಲು ಸೂಚಿಸುತ್ತಾರೆ ಎಂದು ಅನೇಕ ಜನರು ನನಗೆ ಹೇಳಿದರು ಎಂದು ಹಾಮಿದ್ ಮೀರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಅರ್ನಬ್ ಈಗ ಪತ್ರಕರ್ತನಾಗಿ ಉಳಿದಿಲ್ಲ. ಪಾಕ್ ಬೈದು TRP ಹೆಚ್ಚಳ ಮಾಡಿಕೊಳ್ಳುವುದೇ ಅವರ ಉದ್ದೇಶ. ಅವರ ಯಾವ ಮಾತಿಗೂ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹಾಮಿದ್ ಮೀರ್ ತಿಳಿಸಿದ್ದಾರೆ.




