ಹೂಸ್ಟನ್: ಅಮೆರಿಕದ ಟೆಕ್ಸಾಸ್‌ನ ಸಿಟಿ ಕೌನ್ಸಿಲ್‌ನ ರನ್‌ಆಫ್ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರಾದ ಸಂಜಯ್ ಸಿಂಘಾಲ್ ಮತ್ತು ಸುಖ್ ಕೌರ್ ಅವರು ಗೆಲುವು ಸಾಧಿಸಿದ್ದಾರೆ ಮತ್ತು ಹೆಚ್ಚು ಭಾರತೀಯರು ವಾಸಿಸುತ್ತಿರುವ ಶುಗರ್ ಲ್ಯಾಂಡ್‌ಗೆ ಕರೋಲ್ ಮೆಕಚಿಯನ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಶುಗರ್ ಲ್ಯಾಂಡ್‌ನ 'ಡಿಸ್ಟ್ರಿಕ್ಟ್-2'ನಲ್ಲಿ ನಿವೃತ್ತ ಇಂಧನ ಕಾರ್ಯನಿರ್ವಹಕ ಮತ್ತು ಐಐಟಿ ದೆಹಲಿಯ ಪದವೀಧರರಾದ ಸಂಜಯ್ ಸಿಂಘಾಲ್ ಅವರು 777 ಮತಗಳ ಮುನ್ನಡೆಯೊಂದಿಗೆ ನಾಸಿರ್ ಹುಸೇನ್ ಅವರ ವಿರುದ್ಧ ಜಯ ಗಳಿಸಿದ್ದಾರೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
ಶಿಕ್ಷಣ ಸುಧಾರಕರಾದ ಸಿಖ್ ಅಮೆರಿಕನ್, ಸುಖ್ ಕೌರ್ ಅವರು ಸ್ಯಾನ್ ಆಂಟೋನಿಯಾದಲ್ಲಿ ಪ್ಯಾಟಿ ಗಿಬ್ಬನ್ಸ್ ವಿರುದ್ಧ ಶೇ 65ರಷ್ಟು ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಶುಗರ್ ಲ್ಯಾಂಡ್‌ನ ಮೇಯರ್ ಸ್ಫರ್ಧೆಯಲ್ಲಿ ನಿವೃತ್ತ ಎಂಜಿನಿಯರ್ ಆದ ಕರೋಲ್ ಮೆಕಚಿಯನ್ ಅವರು ವಿಲಿಯಂ ಫರ್ಗ್ಯೂಸನ್ ಅವರನ್ನು ಸೋಲಿಸಿ, ನೂತನ ಮೇಯರ್ ಆಗಿ ಆಯ್ಕೆಯಾದರು.




