ತಲೆನೋವು ಅಥವಾ ಮೈಕೈ ನೋವು ಕಾಣಿಸಿಕೊಂಡರೆ ಸಾಕು ನಮ್ಮಲ್ಲಿ ಪ್ಯಾರೆಸಿಟಮಾಲ್ ಗುಳಿಗೆ ನುಂಗುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಹೆಚ್ಚಾಗಿ ಇಂತಹ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದ ತೆಗೆದುಕೊಳ್ಳುವವರ ಸಂಖ್ಯೆ ಊಹೆಗೂ ಮೀರಿದ್ದು. ಇದರ ಬಗ್ಗೆ ಬಹುತೇಕ ಜನರಿಗೆ ಹೆಚ್ಚಿನ ಮಾಹಿತಿ ಇಲ್ಲ ಎಂಬುದರಲ್ಲಿ ಕಿಂಚಿತ್ತು ಸಂದೇಹ ಬೇಡಿ.
ಇತ್ತೀಚಿನ ದಿನಗಳಲ್ಲಿ ಈ ಗುಳಿಗೆ ಅನೇಕರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ.
ಜ್ವರ, ತಲೆನೋವು, ಬೆನ್ನುನೋವು, ಶೀತ ಮುಂತಾದ ಸಣಪುಟ್ಟ ಸಾಮಾನ್ಯ ರೋಗಕ್ಕೂ ಇದೇ ಪರಿಹಾರವಾಗಿದೆ. ಮತ್ತೊಂದು ರೀತಿಯಲ್ಲಿ ಹೇಳಬೇಕಾದರೆ ಮನೆಔಷಧಿ ಎನ್ನಬಹುದು. ಕಾರಣ, ಮೇಲ್ಕಂಡ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಏನಾದರೂ ಸಣ್ಣ ರೋಗ-ಲಕ್ಷಣಗಳು ಕಾಣಿಸಿಕೊಂಡರೆ ಸಾಕು, ಜನರು ಈ ಪ್ಯಾರಸಿಟಮಾಲ್ ಮಾತ್ರೆಯನ್ನು ಕುಳಿತಲ್ಲೇ ನುಂಗಿ ಬಿಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಂದರೆ ಪ್ರಾಥಮಿಕ ಹಂತದಲ್ಲಿ ತೆಗೆದುಕೊಳ್ಳುವುದು ಓಕೆ. ಅದೇ ಒಂದು, ಎರಡಕ್ಕಿಂತ ಹೆಚ್ಚಾಗಿ ನುಂಗಿದ್ದಲ್ಲಿ ಅದು ದೇಹದ ಅಂಗಗಳ ಮೇಲೆ ತೀರ ಪ್ರಭಾವ ಬೀರಲು ಪ್ರಾರಂಭಿಸುತ್ತದೆ. ಇದು ಇಲ್ಲದ ರೋಗಕ್ಕೆ ಆಹ್ವಾನ ನೀಡುತ್ತವೆ.
ಅತಿಯಾಗಿ ಪ್ಯಾರೆಸಿಟಮಾಲ್ ಬಳಸುವುದರಿಂದ ದೇಹಕ್ಕೆ ಏನ್ನೆಲ್ಲ ಸಮಸ್ಯೆಗಳು ಉಂಟಾಗಬಹುದು? ಅದರಿಂದ ಹೊರಬರಲು ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂಬುದರ ಮಾಹಿತಿ ಹೀಗಿದೆ ಗಮನಿಸಿ.
1. ಯಕೃತ್ತು (ಲಿವರ್) ಹಾನಿ
ಹೆಚ್ಚಿನ ಪ್ರಮಾಣದಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದ ನಮ್ಮ ದೇಹದಲ್ಲಿನ ಲಿವರ್ಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ಇದು ಅದರ ಕಾರ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಕೆಲವು ಸಂದರ್ಭಗಳಲ್ಲಿ, ಇದು ಯಕೃತ್ತು ಕಸಿ ಮಾಡಿಸಿಕೊಳ್ಳುವ ಮಟ್ಟಕ್ಕೂ ತಲುಪಬಹುದು. ಮದ್ಯಪಾನ ಮಾಡುವವರಿಗೆ ಇದು ಹೆಚ್ಚಿನ ಅಪಾಯಕಾರಿ.
2. ವಾಂತಿ, ನೋವು, ಮಲಬದ್ಧತೆ
ಡೋಸೇಜ್ ಹೆಚ್ಚಾದರೆ ಮಾತ್ರ ಅಪಾಯ ಕಟ್ಟಿಟ್ಟಬುತ್ತಿ. ಪ್ಯಾರೆಸಿಟಮಾಲ್ ಅನ್ನು ಮಿತಿಮೀರಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀರಬಹುದು. ಕ್ರಮೇಣ, ಹೊಟ್ಟೆ ನೋವು, ವಾಂತಿ ಮತ್ತು ಅತಿಸಾರ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.
3. ಚರ್ಮದ ಮೇಲೆ ಅಲರ್ಜಿ ಸಮಸ್ಯೆ
ಹೆಚ್ಚು ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದ ಚರ್ಮದ ಸಮಸ್ಯೆಗಳು ಉಲ್ಬಣಿಸಬಹುದು. ಔಷಧದ ಪ್ರತಿಕ್ರಿಯೆಯು ಚರ್ಮದ ಮೇಲೆ ಕೆಂಪು ದದ್ದುಗಳು, ಊತ ಮತ್ತು ಗುಳ್ಳೆಗಳನ್ನು ಉಂಟುಮಾಡಬಹುದು.
4. ಮೂತ್ರಪಿಂಡದ ಸಮಸ್ಯೆ
ಅಧಿಕ ಪ್ಯಾರೆಸಿಟಮಾಲ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವುಗಳ ಕಾರ್ಯವನ್ನು ಇನ್ನಷ್ಟು ದುರ್ಬಲಗೊಳಿಸಬಹುದು. ಮೂತ್ರಪಿಂಡಗಳ ಆರೋಗ್ಯದ ಮೇಲೆ ಇದರ ಪರಿಣಾಮ ಹೆಚ್ಚು.
5. ಮಿದುಳಿಗೂ ಎಫೆಕ್ಟ್
ಪ್ಯಾರೆಸಿಟಮಾಲ್ ಅತಿಯಾಗಿ ಬಳಸುವುದರಿಂದ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ರೋಗಗ್ರಸ್ತವಾಗುವಿಕೆಗಳು ಮತ್ತು ಕೋಮಾಗೆ ಹೋಗುವ ಅಪಾಯವೂ ಹೆಚ್ಚಿದೆ.
ಮಿತಿಮೀರಿದ ಸೇವನೆಯಿಂದ ಎದುರಾಗುವ ಲಕ್ಷಣಗಳು
- ವಾಕರಿಕೆ, ಹಸಿವು ಕಣ್ಮರೆ ಮತ್ತು ವಾಂತಿ. 24 ಗಂಟೆಗಳ ಬಳಿಕ ಕಾಮಾಲೆ, ಹಳದಿ ಕಣ್ಣು/ಚರ್ಮ ಮತ್ತು ಮೂತ್ರದ ಬಣ್ಣ ಬದಲಾಗುವಿಕೆ.
- ಅಪರೂಪದ ಪ್ರಕರಣಗಳಲ್ಲಿ, ಹೃದಯ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ತಪ್ಪಿಸುವುದು ಹೇಗೆ?
- ಔಷಧದ ಡೋಸೇಜ್ ಹೇಗೆ ಗಮನಿಸುವುದು ಎಂಬ ನಿಮ್ಮ ಪ್ರಶ್ನೆಗೆ ಉತ್ತರ, ಒಂದೇ ದಿನದಲ್ಲಿ 500 ಮಿಗ್ರಾಂ ಮೀರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದಕ್ಕೆ ತಕ್ಕಂತೆ ಪ್ಯಾರಸಿಟಮಾಲ್ ಬಳಕೆ ಮಾಡಿ.
- ಪ್ಯಾರೆಸಿಟಮಾಲ್ ವಿಕ್ಸ್, ಡೋಲೋ ಮತ್ತು ಕ್ರೋಸಿನ್‌ನಂತಹ ವಿವಿಧ ಬ್ರಾಂಡ್‌ಗಳಲ್ಲಿ ಲಭ್ಯವಿದೆ. ಆದ್ದರಿಂದ, ಒಂದೇ ಸಮಯದಲ್ಲಿ ಎರಡು ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳದಂತೆ ಎಚ್ಚರಿಕೆ ವಹಿಸಿ. ಈ ವಿಷಯ ನಿಮ್ಮ ಗಮನದಲ್ಲಿರಲಿ.
- ಮದ್ಯ ಸೇವಿಸುವ ಜನರು ಪ್ಯಾರೆಸಿಟಮಾಲ್ ಮಾತ್ರೆಗಳೊಂದಿಗೆ ಹೆಚ್ಚು ಜಾಗರೂಕರಾಗಿರಬೇಕು. ಕಾರಣ, ಮದ್ಯ ಸೇವನೆಯು ಲಿವರ್ಗೆ ಹಾನಿಯನ್ನುಂಟುಮಾಡಬಹುದು.
- ಮಕ್ಕಳಿಗೆ ಈ ಔಷಧಿಯನ್ನು ಅವರ ವಯಸ್ಸಿಗೆ ತಕ್ಕಂತೆ ನೀಡಬೇಕು. ಅದು ವೈದ್ಯರ ಸಲಹೆ ಮೇರೆಗೆ. ಎಲ್ಲರಿಗೂ ಒಂದೇ ಡೋಸೇಜ್ ನೀಡುವುದು ಅಪಾಯಕಾರಿ.
- ಪ್ಯಾರೆಸಿಟಮಾಲ್ ವಾಸ್ತವವಾಗಿ ಸುರಕ್ಷಿತ ಔಷಧ. ಆದಾಗ್ಯೂ, ಇದರ ಅತಿಯಾದ ಮತ್ತು ಅಜಾಗರೂಕ ಬಳಕೆಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಎಡಮಾಡಿಕೊಡಬಹುದು.
- ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ದೀರ್ಘಕಾಲದವರೆಗೆ ಸೇವಿಸುವುದರಿಂದ ಅದು ಔಷಧಿಗಿಂತ ವಿಷವಾಗಬಹುದು. ಅದಕ್ಕಾಗಿಯೇ ಯಾವುದೇ ಔಷಧಿಯನ್ನು ವೈದ್ಯರ ಸಲಹೆಯೊಂದಿಗೆ ಬಳಸುವುದು ಸೂಕ್ತ.




