ಬದಿಯಡ್ಕ/ಕುಂಬಳೆ: ಎಡೆಬಿಡದೆ ಸುರಿಯುತ್ತಿರುವ ವ್ಯಾಪಕ ಮಳಡೆಯಿಂದ ನದಿಗಳು ತುಂಬಿ ತುಳುಕುತ್ತಿದೆ. ಜಿಲ್ಲೆಯ ಮಂಜೇಶ್ವರ ಹಾಗೂ ಪುತ್ತಿಗೆ ಹೊಳೆಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿರುವುದರಿಂದ ಹೊಳೆ ಪರಿಸರ ನಿವಾಸಿಗಳಿಗೆ ಎಚ್ಚರಿ ನೀಡಲಾಗಿದ್ದು, ಯಾವುದೇ ಹೊತ್ತಲ್ಲೂ ಸ್ಥಳಾಂತರಕ್ಕೆ ಸಿದ್ದವಿರಲು ಸೂಚಿಸಲಾಗಿದೆ.
ಜೊತೆಗೆ ಮಧೂರು ಮತ್ತು ಉಪ್ಪಳ ಹೊಳೆಗಳು ತುಂಬಿ ತುಳುಕುತ್ತಿದ್ದು ಅಪಾಯ ಮಟ್ಟದಲ್ಲಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಮಿಕ್ಕುಳಿದಂತೆ ಅಡ್ಕಸ್ಥಳ, ಪೆರಡಾಲದ ವರದಾ ನದಿ, ಕಾರಡ್ಕ-ಅಡೂರು-ಬೋವಿಕ್ಕಾನ ವ್ಯಾಪ್ತಿಯ ಚಂದ್ರಗಿರಿ(ಪಯಸ್ವಿನಿ) ತುಂಬಿಕೊಂಡು ವ್ಯಾಪಕ ಪ್ರಮಾಣದ ಪ್ರವಾಹ ಉಂಟಾಗಿದೆ.
ವರ್ಕಾಡಿ, ಮೀಂಜ, ಮಂಗಲ್ಪಾಡಿ, ಪೈವಳಿಕೆ, ಪುತ್ತಿಗೆ, ಎಣ್ಮಕಜೆ, ಬದಿಯಡ್ಕ, ಮಧೂರು, ಕುಂಬಳೆ, ಕುಂಬ್ಡಾಜೆ, ಬೆಳ್ಳೂರು, ಅಡೂರು, ಕಾರಡ್ಕ ಪಂಚಾಯತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತವಾಗಿದೆ. ಅಡಕೆ, ತೆಂಗು, ಬಾಳೆ ತೋಟಗಳಿಗೆ ಭಾರೀ ಹಾನಿಯಾಗಿದೆ.
PHOTOS:1) ತುಂಬಿ ಹರಿಯುತ್ತಿರುವ ಪುತ್ತಿಗೆ ಹೊಳೆ,(2)ಚಂದ್ರಗಿರಿ(ಪಯಸ್ವಿನಿ ನದಿ ಎಲ್ಲೆಮೀರಿ ಹರಿಯುತ್ತಿರುವುದು






