HEALTH TIPS

ತಮಿಳುನಾಡು | ನಾಮನಿರ್ದೇಶಿತ ಸದಸ್ಯರಾಗಿ ಅಂಗವಿಕಲರ ನೇಮಕ: ರಾಜ್ಯಪಾಲರ ಅಂಕಿತ

ಚೆನ್ನೈ: ತಮಿಳುನಾಡಿನ 20 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಅಂಗವಿಕಲರು ನೇಮಕಗೊಳ್ಳಲಿದ್ದಾರೆ. ರಾಜ್ಯಪಾಲ ಆರ್‌.ಎನ್‌.ರವಿ ಇದಕ್ಕೆ ಸಂಬಂಧಿಸಿದ ಮಸೂದೆಗೆ ಅನುಮೋದನೆ ನೀಡಿದ್ದಾರೆ.

ಸುದ್ದಿಗಾರರೊಂದಿಗಡ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಸದನದಲ್ಲಿ ಒಪ್ಪಿಗೆ ಲಭಿಸಿದ 45 ದಿನಗಳ ಬಳಿಕ ರಾಜ್ಯಪಾಲರು ಈ ಮಸೂದೆಗೆ ಸಹಿ ಹಾಕಿದ್ದಾರೆ.

'ರಾಜ್ಯ ಸರ್ಕಾರ ಮತ್ತೆ ಕೋರ್ಟ್‌ಗೆ ಹೋಗಬಹುದು ಎಂಬ ಭಯದಿಂದ ರಾಜ್ಯಪಾಲರು ಮಸೂದಗೆ ಬೇಗ ಸಹಿ ಹಾಕಿದ್ದಾರೆ' ಎಂದು ಹೇಳಿದ್ದಾರೆ.

ಸದ್ಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲ ಸದಸ್ಯರ ಸಂಖ್ಯೆ ಶೇ 35ರಷ್ಟಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಶ್ರಮಿಸುತ್ತಿದ್ದು, ಹೊಸ ಕಾಯ್ದೆಯಿಂದ 650 ನಗರ ಸ್ಥಳೀಯ ಸಂಸ್ಥೆಗಳು, 12,913 ಗ್ರಾಮ ಪಂಚಾಯಿತಿಗಳು, 388 ಪಂಚಾಯಿತಿ ಒಕ್ಕೂಟಗಳು ಮತ್ತು 37ಜಿಲ್ಲಾ ಪಂಚಾಯಿತಿಗಳಲ್ಲಿ ಅಂಗವಿಕಲರ ಸದಸ್ಯ ಬಲ ಹೆಚ್ಚಲಿದೆ.

'ಈ ಮಸೂದೆಯು ಸ್ಥಳೀಯ ಆಡಳಿತದಲ್ಲಿ ಅಂಗವಿಕಲರಿಗೆ ಸಮಾನ ಅವಕಾಶ ಮತ್ತು ವಿಶೇಷ ಹಕ್ಕುಗಳನ್ನು ಕಲ್ಪಿಸುತ್ತದೆ' ಎಂದೂ ಸ್ಟಾಲಿನ್‌ ಹೇಳಿದ್ದಾರೆ.

ತಮಿಳುನಾಡು ಸರ್ಕಾರವು 2021ರಲ್ಲಿ ₹ 667ಕೋಟಿ ಅನುದಾನವನ್ನು ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದೆ. 2025ರಲ್ಲಿಈ ಮೊತ್ತವು ₹1,432 ಕೋಟಿಗೆ ಏರಿಕೆಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries