ಕಾಸರಗೋಡು: ಕೇಂದ್ರೀಯ ವಿದ್ಯಾಲಯ ಪ್ರಾದೇಶಿಕ ಯೋಗ ಚಾಂಪಿಯನ್‍ಶಿಪ್‍ನಲ್ಲಿ ಕಾಸರಗೋಡಿನ ಅಭಿಜ್ಞಾ ನಾಲ್ಕನೇ ಬಾರಿಗೆ ಚಿನ್ನ ಗೆದ್ದಿದ್ದಾರೆ. ಕಾಸರಗೋಡಿನ ಸಿಪಿಸಿಆರ್‍ಐ ಕೇಂದ್ರೀಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಇವರು ಹರೀಶ್-ತೇಜ ಕುಮಾರಿ ದಂಪತಿ ಪುತ್ರಿ. ಇವರು 7 ನೇ ತರಗತಿಯಿಂದ ಎರ್ನಾಕುಲಂ ಪ್ರಾದೇಶಿಕ ಯೋಗ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುತ್ತಿದ್ದು, ಸತತವಾಗಿ ಯೋಗ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸ್ಪರ್ಧೆಯು ತಿರುವನಂತಪುರಂ, ಅಲುವಾ ಮತ್ತು ಕಳೆದ ಎರಡು ವರ್ಷಗಳಲ್ಲಿ ಪಾಲಕ್ಕಾಡ್‍ನ ಕಂಚಿಕೋಟೆ ಕೇಂದ್ರೀಯ ವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು.
ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಯೋಗ ಫಾರ್ ಕಿಡ್ಸ್ ಯೋಗ ತರಬೇತಿ ಕೇಂದ್ರದಲ್ಲಿ ತನ್ನ ತಾಯಿ ತೇಜಕುಮಾರಿ ಅವರ ಬಳಿ ಅಭಿಜ್ಞಾ ಯೋಗ ಕಲಿಯುತ್ತಿದ್ದಾರೆ. ತಂದೆ: ಹರೀಶ್.


