ಪತ್ತನಂತಿಟ್ಟ: ಗುಜರಾತಿನ ಅಹಮ್ಮದಾಬಾದ್‍ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವ ಕೇರಳದ ಪತ್ತನಾಂತಿಟ್ಟ ಜಿಲ್ಲೆಯ ಕೋಯಂಜೇರಿ ಪುಲ್ಲಾಡ್ ನಿವಾಸಿ ರಂಜಿತಾ ಆರ್. ನಾಯರ್(39)ಮೃತದೇಹದ ಗುರುತು ಪತ್ತೆ ಇನ್ನೂ ಸಾಧ್ಯವಾಗಿಲ್ಲ. ರಂಜಿತಾ ಅವರ ಸಹೋದರ ರತೀಶ್ ಜಿ. ನಾಯರ್ ಅಹಮ್ಮದಾಬಾದ್‍ಗೆ ತೆರಳಿದ್ದು, ಡಿಎನ್‍ಎ ತಪಾಸಣೆಗಾಗಿ ಮಾದರಿ ನೀಡಿದ್ದರೂ, ಪತ್ತೆಕಾರ್ಯ ಸಾಧ್ಯವಾಗಿಲ್ಲ.
ಓಮನ್‍ನಲ್ಲಿ ದಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ರಂಜಿತಾಗೆ ಯುಕೆಯಲ್ಲಿ ಹೊಸದಾಗಿ ದಾದಿ ಕೆಲಸ ಲಭಿಸಿದ್ದು, ಇದಕ್ಕಾಗಿ ಲಂಡನ್‍ಗೆ ತೆರಳಲು ಅಹಮ್ಮದಾಬಾದ್‍ನಿಂದ ಜೂ. 12ರಂದು ಮಧ್ಯಾಹ್ನ ಲಂಡನ್‍ಗೆ ಪ್ರಯಾಣ ಆರಂಭಿಸಿದ್ದರು. ಇವರಿದ್ದ ಎಐ-171ವಿಮಾನ ಟೇಕಾಫ್ ಆದ ಕೆಲವೇ ನಿಮಿಷದಲ್ಲಿ ಪತನಗೊಂಡಿತ್ತು.


