ಟೆಹರಾನ್: ಇಸ್ರೇಲ್ ಮೇಲಿನ ದಾಳಿಯಲ್ಲಿ ತೀವ್ರತೆ ಹೆಚ್ಚಿಸಲಾಗಿದೆ. ಹೆಚ್ಚು ಬಲಶಾಲಿ ಕ್ಷಿಪಣಿಗಳನ್ನು ಇಸ್ರೇಲ್ ನಡೆಗೆ ಹಾರಿಸಲಾಗಿದೆ ಎಂದು ಇರಾನ್ ನ ಕ್ರಾಂತಿಕಾರಿ ಗಾರ್ಡ್ ಗಳು ಹೇಳಿದ್ದಾರೆ ಎಂದು ಇರಾನ್ ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.
"ಸಶಸ್ತ್ರ ಪಡೆಗಳಿಂದ, ವಿಶೇಷವಾಗಿ ಸೇನಾಪಡೆಗಳಿಂದ ಇಸ್ರೇಲ್ ನೆಡೆಗೆ ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ತೀವ್ರ ದಾಳಿ ಪ್ರಾರಂಭವಾಗಿದೆ. ಮುಂಬರುವ ಗಂಟೆಗಳಲ್ಲಿ ದಾಳಿಯ ತೀವ್ರತೆ ಹೆಚ್ಚಳವಾಗಲಿದೆ", ಎಂದು ಸೇನಾ ಪಡೆಗಳ ಕಮಾಂಡರ್ ಕಿಯೋಮರ್ಸ್ ಹೈದರಿ ಹೇಳಿರುವುದಾಗಿ ತಿಳಿದು ಬಂದಿದೆ.




