ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಜೂ. 17ರ ವರೆಗೆ ಭಾರೀ ಮಳೆಗೆ ಸಾಧ್ಯತೆಯಿರುವುದಾಗಿ ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂ. 15ರ ವರೆಗೆ ಕಾಸರಗೋಡು ಹಾಗೂ ಕಣ್ಣುರು ಜಿಲ್ಲೆಯಲ್ಲಕಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24ತಾಸುಗಳಲ್ಲಿ 204.4ಮಿ.ಮೀ ಮಳೆಯಾಗುವ ಸಾಧ್ಯತೆಯಿದ್ದು, ತಗ್ಗು ಪ್ರದೇಶ ಹಾಗೂ ಹೊಳೆ ಸನಿಹದ ನಿವಾಸಿಗಳು ಜಾಗ್ರತೆ ಪಾಲಿಸುವಂತೆ ಸೂಚಿಸಲಗಿದೆ.


