ತಿರುವನಂತಪುರಂ: ಹಣಕಾಸು ಇಲಾಖೆಯ ಬೇಜವಾಬ್ದಾರಿಯಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿರುವ ಪಡಿತರ ಅಂಗಡಿಗಳ ಮೂಲಕ ವಿತರಿಸುವ ಸೀಮೆಎಣ್ಣೆ ಪೂರೈಕೆ ಈವರೆಗೂ ಆರಂಭವಾಗಿಲ್ಲ. ಮತ್ತೆ ಸೀಮೆ ಎಣ್ಣೆ ವಿತರಿಸುವುದಾಗಿ ಘೋಷಿಸಿ ಒಂದು ವಾರ ಕಳೆದರೂ ಈವರೆಗೆ ಯಾವುದೇ ಕ್ರಮಗಳು ಮುನ್ನಡೆಯದಿರುವುದು ಹತಾಶೆ ಮೂಡಿಸಿದೆ.
ಎರಡು ವರ್ಷಗಳಿಂದ ಸ್ಥಗಿತಗೊಂಡಿರುವ ಸೀಮೆಎಣ್ಣೆ ಪೂರೈಕೆ ಜೂ.20 ರಂದು ಪುನರಾರಂಭಗೊಳ್ಳಲಿದೆ ಎಂಬ ಘೋಷಣೆಯೊಂದಿಗೆ, ಅನೇಕ ಜನರು ಸೀಮೆಎಣ್ಣೆ ಪೂರೈಕೆ ಆರಂಭವಾಗಿದೆ ಎಂಬ ಭರವಸೆಯಲ್ಲಿ ಪಡಿತರ ಅಂಗಡಿಗಳಲ್ಲಿ ವಿಚಾರಿಸುತ್ತಿರುವುಉದ ಕಂಡುಬಂದಿದೆ. ಪಡಿತರ ವ್ಯಾಪಾರಿಗಳ ಸಂಘಟನೆಗಳು ಸರ್ಕಾರವನ್ನು ಸೀಮೆಎಣ್ಣೆ ವಿತರಣೆಗೆ 10 ರೂ.ಗಳ ಕಮಿಷನ್ ನೀಡುವಂತೆ ವಿನಂತಿಸಿದ್ದವು.
ಆದರೆ, ಸಾರ್ವಜನಿಕ ವಿತರಣಾ ಇಲಾಖೆಯು 7 ರೂ. ಕಮಿಷನ್ ನೀಡುವುದಾಗಿ ತಿಳಿಸಿದೆ. ವ್ಯಾಪಾರಿಗಳು ಇದನ್ನು ಒಪ್ಪಿಕೊಂಡರೂ, ಹಣಕಾಸು ಇಲಾಖೆ ಒಪ್ಪಲಿಲ್ಲ.
ಇಲಾಖೆಯು 6 ರೂ. ಕಮಿಷನ್ ನೀಡುತ್ತದೆ ಎಂಬುದನ್ನು ಪಡಿತರ ವ್ಯಾಪಾರಿಗಳ ಸಂಘಟನೆಗಳು ಸಹ ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ವಿತರಣೆಯನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ.
ಪಡಿತರ ವ್ಯಾಪಾರಿಗಳೇ ಡಿಪೋಗಳಿಗೆ ತೆರಳಿ ಸೀಮೆಎಣ್ಣೆ ಕೊಂಡೊಯ್ಯಬೇಕು ಎಂಬ ಸಲಹೆಯೂ ಅಡ್ಡಿಯಾಯಿತು. ಪಡಿತರ ವ್ಯಾಪಾರಿಗಳು ಡಿಪೋಗಳಿಗೆ ತೆರಳಿ ಸೀಮೆಎಣ್ಣೆ ಸಂಗ್ರಹಿಸಲು ಸಿದ್ಧರಿಲ್ಲ.
ಸುಡುವ ವಸ್ತುಗಳನ್ನು ಟ್ಯಾಂಕರ್ ಲಾರಿಗಳಲ್ಲಿ ಸಾಗಿಸಬೇಕೆಂದು ಕಾನೂನಿನಲ್ಲಿ ಹೇಳಲಾಗಿದೆ. ಟ್ಯಾಂಕರ್ ಲಾರಿಗಳಲ್ಲಿ ಪಡಿತರ ಅಂಗಡಿಗಳಿಗೆ ಸೀಮೆಎಣ್ಣೆ ಸಾಗಿಸುವುದರಿಂದ ಭಾರೀ ವೆಚ್ಚವಾಗುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಅಷ್ಟೇ ಅಲ್ಲದೆ, ಸೋರಿಕೆಯಿಂದ ನಷ್ಟವೂ ಉಂಟಾಗುತ್ತದೆ.
ಹಿಂದೆ, ಜಿಲ್ಲೆಯಲ್ಲಿ 22 ಸಗಟು ವಿತರಣಾ ಡಿಪೋಗಳಿದ್ದವು, ಆದರೆ ಈಗ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಸೀಮೆಎಣ್ಣೆ ಪೂರೈಕೆ ಕೊನೆಗೊಂಡಿರುವುದರಿಂದ, ಇತರ ಡಿಪೆÇೀಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ.
ಈ ಡಿಪೆÇೀಗಳ ಪರವಾನಗಿಗಳನ್ನು ಸಹ ನವೀಕರಿಸಲಾಗಿಲ್ಲ. ಸೀಮೆಎಣ್ಣೆ ತಲುಪಿಸಲು ವಾಹನಗಳು ಲಭ್ಯವಿಲ್ಲದ ಪರಿಸ್ಥಿತಿ ಇದೆ.
ಅಭಿಮತ:
-ಹಲವು ಸಮಸ್ಯೆ-ಸವಾಲುಗಳ ಬಳಿಕ ಸೀಮೆಎಣ್ಣೆ ವಿತರಣೆಗೆ ಕೊನೆಗೂ ಕಾಲ ಕೂಡಿಬಂದಿದೆ. ಸರ್ಕಾರದಿಂದ ವಿತರಣೆಗೆ ಅನುಮತಿ ಬಂದಿದ್ದು, ಆಯಾ ತಾಲೂಕು ಸಪ್ಲೈ ಕಚೇರಿಗಳ ಮೂಲಕ ಈ ನಿಟ್ಟಿನ ವ್ಯವಸ್ಥೆ ಪ್ರಗತಿಯಲ್ಲಿದೆ. ಈ ಹಿಂದಿದ್ದ ಕಮಿಷನ್ ಮೊತ್ತ ಅಲ್ಪ ಹೆಚ್ಚಳಗೊಳಿಸಲಾಗಿದ್ದು, ಎರಡು ವಾರಗಳಲ್ಲಿ ಪಡಿತರ ವಿತರಣಾ ಕೇಂದ್ರಗಳಿಗೆ ಸೀಮೆಎಣ್ಣೆ ತಲುಪಲಿದೆ.
-ಕೃಷ್ಣ ನಾಯ್ಕ್ ಬಿ.
ಕಾಸರಗೋಡು ತಾಲೂಕು ಸಾರ್ವಜನಿಕ ವಿತರಣಾ ಅಧಿಕಾರಿ.




.jpg)
