ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡು ಅಶ್ವಿನಿ ನಗರದ ಬಾಲ ಭವನ ಆಂಗ್ಲ ಮಾಧ್ಯಮ ಶಾಲೆ ಶಾಲಾ ಪ್ರವೇಶೋತ್ಸವ ಪೂರ್ವಭಾವಿಯಾಗಿ ಶಾಲಾ ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳನ್ನೊಳಗೊಂಡ ಮೆರವಣಿಗೆ ನಡೆಯಿತು. ಶಾಲಾ ಮುಖ್ಯಶೀಕ್ಷಕಿ ಲೀಲಾವತಿ ನಾಯರ್, ಅಕಾಡಮಿಕಲ್ ಎಡ್‍ವೈಸರ್ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರ ಸಭಾ ಸದಸ್ಯೆ ಪವಿತ್ರ ಮೊದಲಾದವರು ಉಪಸ್ಥಿತರಿದ್ದರು.






