HEALTH TIPS

ಹಳೆಯ DNA ಬಳಸಿ 10,500 ವರ್ಷ ವಯಸ್ಸಿನ ಮಹಿಳೆಯ ಮುಖವನ್ನು ಮರುಸೃಷ್ಟಿಸಿದ ವಿಜ್ಞಾನಿಗಳು

ಜಗತ್ತಿನ ಹಲವು ವಿಚಾರಗಳ ಮೇಲೆ ಸಂಶೋಧನೆಗಳು ನಡೆಯುತ್ತಲೇ ಇರುತ್ತದೆ. ಆ ಸಂಶೋಧನೆಗಳ ಮೂಲಕ ಹಲವು ಅಚ್ಚರಿಯ ವಿಚಾರಗಳು ನಮಗೆ ತಿಳಿಯುತ್ತದೆ. ಇದೀಗ ಅಮೆರಿಕದ ವಿಶ್ವವಿದ್ಯಾಲಯವೊಂದು ಇಂತಹದೇ ಒಂದು ಸಂಶೋಧನೆಯನ್ನು ಮಾಡಿದೆ. ಘೆಂಟ್ ವಿಶ್ವವಿದ್ಯಾಲಯದ ಸಂಶೋಧಕರು 10,500 ವರ್ಷಗಳ ಹಿಂದೆ ಇಂದಿನ ಬೆಲ್ಜಿಯಂ ಮಹಿಳೆಯ ಮುಖವನ್ನು ಮರುಸೃಷ್ಟಿಸಿದ್ದಾರೆ.

ಬೆಲ್ಜಿಯಂನಲ್ಲಿ ವಾಸಿಸುತ್ತಿದ್ದ ಮಸುಕಾದ, ಕಪ್ಪು ಕೂದಲಿನ, ನೀಲಿ ಕಣ್ಣಿನ ಹಳೆಯ ಇತಿಹಾಸ ಹೊಂದಿರುವ ಮಹಿಳೆಯ ಚಿತ್ರ ಮಾಡಿದ್ದಾರೆ. ಮ್ಯೂಸ್ ನದಿ ಕಣಿವೆಯಲ್ಲಿ ವಾಸಿಸಿ ಮರಣ ಹೊಂದಿದ ಮಹಿಳೆಯ ಮುಖವನ್ನು ಪ್ರಾಚೀನ ಡಿಎನ್‌ಎ ಬಳಸಿ ಚಿತ್ರಿಸಲಾಗಿದೆ. 1988 ರಲ್ಲಿ, ಮೆಸೊಲಿಥಿಕ್ ಮಹಿಳೆಯ ಅವಶೇಷಗಳು ಡೈನಾಂಟ್‌ ಹತ್ತಿರದಲ್ಲಿರುವ ಮಾರ್ಗೌಕ್ಸ್ ಗುಹೆಯಲ್ಲಿ ಕಂಡುಬಂದಿತ್ತು. ಈ ಜನಾಂಗದವರು ಪಶ್ಚಿಮ ಯುರೋಪಿನ ಬೇಟೆಗಾರರಾಗಿದ್ದರು. ಗ್ರೇಟ್ ಬ್ರಿಟನ್‌ನ ಜನಪ್ರಿಯ ಚೆಡ್ಡಾರ್ ಮನುಷ್ಯನಂತೆಯೇ ಅವರು ಕೂಡ ವಾಸಿಸುತ್ತಿದ್ದರು.

ಡಿಎನ್‌ಎ ಅಧ್ಯಯನದ ಪ್ರಕಾರ, ಮಾರ್ಗೌಕ್ಸ್ ಮಹಿಳೆಯ ಕಣ್ಣುಗಳು ಚೆಡ್ಡಾರ್ ಮನುಷ್ಯಯಂತೆ ನೀಲಿ ಬಣ್ಣದಲ್ಲಿ ಕಾಣುತ್ತದೆ. ಇಲ್ಲಿಯವರೆಗೆ ಪರೀಕ್ಷಿಸಲಾದ ಪಶ್ಚಿಮ ಯುರೋಪಿನ ಇತರ ಮೆಸೊಲಿಥಿಕ್ ವ್ಯಕ್ತಿಗಳಿಗಿಂತ ಅವಳು ಸ್ವಲ್ಪ ಭಿನ್ನವಾಗಿದ್ದು, ಹಗುರವಾದ ಮೈಬಣ್ಣವನ್ನು ಹೊಂದಿದ್ದಾಳೆ. ಈ ವರದಿಯೂ ನಿರ್ಣಾಯಕ ವಿವರಗಳಾಗಿದೆ ಎಂದು ಮುಖ ತಳಿಶಾಸ್ತ್ರಜ್ಞ ಡಾ. ಮೈಟೆ ರಿವೊಲಾಟ್ ಹೇಳಿದ್ದಾರೆ. ಅಂಗರಚನಾಶಾಸ್ತ್ರ, ಆನುವಂಶಿಕ ಮತ್ತು ಪುರಾತತ್ತ್ವ ಶಾಸ್ತ್ರದ ದತ್ತಾಂಶಗಳ ಸಹಾಯದಿಂದ ಅವಳ ಮುಖ ಮತ್ತು ಜೀವನ ಪರಿಸ್ಥಿತಿಗಳ ಮರುಸೃಷ್ಟಿ ಸಾಧ್ಯವಾಯಿತು ಎಂದು ಹೇಳಲಾಗಿದೆ.

ಘೆಂಟ್ ವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರಜ್ಞ ಇಸಾಬೆಲ್ಲೆ ಡಿ ಗ್ರೂಟ್ ಹೇಳಿರುವ ಪ್ರಕಾರ, ಮ್ಯೂಸ್ ಮಹಿಳೆ ಚೆಡ್ಡಾರ್ ಮನುಷ್ಯನಂತೆ ಕಾಣುತ್ತಾಳೆ. ಈ ಜನಾಂಗದವರು ಈಗ ಯುನೈಟೆಡ್ ಕಿಂಗ್‌ಡಮ್​ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಅಧ್ಯಯನದ ವೇಳೆ ಮಾರ್ಗೌಕ್ಸ್ ಗುಹೆಯಲ್ಲಿ 30ರಿಂದ 60 ವರ್ಷ ವಯಸ್ಸಿನವರು ತಲೆಬುರುಡೆಗಳು ಸಿಕ್ಕಿದೆ ಎಂದು ಹೇಳಿದ್ದಾರೆ. ಇನ್ನು ಈ ಮಹಿಳೆಯ ಮೂಗಿನ ಆಧಾರದ ಮೇಲೆ ಇದು 10,500 ವರ್ಷಗಳ ಹಿಂದೆಯಿದ್ದ ಮಹಿಳೆ ಈಕೆ ಎಂದು ಹೇಳಲಾಗಿದೆ. ಈ ಮಹಿಳೆಯ ಮೂಗು ಚೆಡ್ಡಾರ್ ಮನುಷ್ಯರನ್ನು ಹೋಲುತ್ತಿದೆ ಎಂದು ಹೇಳಲಾಗಿದೆ.

ವಿಶ್ವವಿದ್ಯಾಲಯದ ಪುರಾತತ್ವಶಾಸ್ತ್ರಜ್ಞ ಫಿಲಿಪ್ ಕ್ರೋಂಬೆ ಅವರು ಮಹಿಳೆಯ ತಲೆಬುರುಡೆಯನ್ನು ಆಧಾರವಾಗಿಟ್ಟುಕೊಂಡು ಡಿಎನ್‌ಎಯನ್ನು ಹೊರತೆಗೆಯಲಾಗಿದೆ. ಇನ್ನಷ್ಟು ಈ ಬಗ್ಗೆ ಅಧ್ಯಯನ ಮಾಡಬೇಕಿದೆ ಎಂದು ಹೇಳಿದ್ದಾರೆ. ಅವರ ಆಭರಣಗಳು ಮತ್ತು ಹಚ್ಚೆಗಳಂತಹ ಕೆಲವು ವೈಶಿಷ್ಟ್ಯಗಳು ಮ್ಯೂಸ್ ನದಿ ಕಣಿವೆ ಸಿಕ್ಕಿದೆ. ಈ ಸಾಕ್ಷಿಗಳು ಸಂಶೋಧಕರಿಗೆ ಮಹಿಳೆಯ ದೈನಂದಿನ ಜೀವನದ ಚಿತ್ರವನ್ನು ರಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಅವರ ಮೈಬಣ್ಣ, ಕೂದಲು ಮತ್ತು ಕಣ್ಣುಗಳು ಪ್ರಾಚೀನ ಡಿಎನ್‌ಎಯನ್ನು ಆಧರಿಸಿವೆ. ಇನ್ನು ಈ ಸಂಶೋಧನೆಯ ಮೂಲಕ ಅವರು ಬೇಟೆಯಾಡುವ ವಿಧಾನಗಳಿಂದ ಹಿಡಿದು ಸಾಗಣೆಯವರೆಗೆ, ಸಸ್ಯಗಳಿಂದ ಪ್ರಾಣಿಗಳವರೆಗೆ ಪ್ರತಿಯೊಂದು ವಿವರವನ್ನು ಸೂಕ್ಷ್ಮವಾಗಿ ಮರುಸೃಷ್ಟಿಸಲಾಯಿತು. ಇನ್ನು 1988-1989ರಲ್ಲಿ ಡೈನಾಂಟ್‌ನ ಮಾರ್ಗಾಕ್ಸ್ ಗುಹೆಯಲ್ಲಿ “ಮ್ಯೂಸ್ ವುಮನ್” ನ ಅವಶೇಷಗಳನ್ನು ಇತರ ಎಂಟು ಮಹಿಳೆಯರ ಅವಶೇಷಗಳನ್ನು ಕಂಡುಹಿಡಿಯಲಾಗಿದ್ದು, ಪುರಾತತ್ತ್ವಜ್ಞರು, ಜೈವಿಕ ಮಾನವಶಾಸ್ತ್ರಜ್ಞರು, ತಳಿಶಾಸ್ತ್ರಜ್ಞರು ಹಾಗೂ ಕಲಾವಿದರನ್ನು ಬಳಸಿಕೊಂಡು ಈ ಅಧ್ಯಯನವನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries