ನವದೆಹಲಿ : 1960ರ ಸಿಂಧೂ ಜಲ ಒಪ್ಪಂದದ ಕುರಿತು ಸ್ಥಾಪಿಸಲಾದ ನ್ಯಾಯಾಲಯದ ಪೂರಕ ತೀರ್ಪನ್ನು ಭಾರತವು ತೀವ್ರವಾಗಿ ಟೀಕಿಸಿದೆ. ಸ್ವಯಂ-ನೇಮಕ ಸಮಿತಿಯನ್ನು ಕಾನೂನುಬಾಹಿರ ಎಂದು ಭಾರತದ ವಿದೇಶಾಂಗ ಟೀಕಿಸಿದೆ.
1960ರ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ರಚಿಸಲಾದ ಮಧ್ಯಸ್ಥಿಕೆ ನ್ಯಾಯಾಲಯವು, ಸೂಕ್ತ ಕೆಲಸವನ್ನೇ ಮಾಡಿಲ್ಲ.
ಭಾರತವು ಮಧ್ಯಸ್ಥಿಕೆಗೆಂದು ಬರುವ ಯಾರನ್ನೂ ಒಪ್ಪುವುದಿಲ್ಲ. ಭಾರತವು ಮಧ್ಯಸ್ಥಿಕೆ ನ್ಯಾಯಾಲಯದ ಅಸ್ತಿತ್ವವನ್ನು ಎಂದಿಗೂ ಒಪ್ಪಿಲ್ಲ ಎಂದು ಭಾರತ ಹೇಳಿದೆ.
'ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ನಡೆಯುವ ಯಾವುದೇ ವಿಚಾರಣೆಗಳು ಮತ್ತು ಅದು ತೆಗೆದುಕೊಳ್ಳುವ ಯಾವುದೇ ತೀರ್ಪು ಅಥವಾ ನಿರ್ಧಾರಗಳನ್ನು ಭಾರತ ಒಪ್ಪುವುದಿಲ್ಲ' ಎಂದು ವಿದೇಶಾಂಗ ಇಲಾಖೆ ಹೇಳಿದೆ.
ಪಹಲ್ಗಾಂನಲ್ಲಿ 26 ಪ್ರವಾಸಿಗರು ನೆತ್ತರುಹರಿಸಿದ ಪಾಕಿಸ್ತಾನಕ್ಕೆ ಭಾರತ ನುಗ್ಗಿ ಹೊಡೆದು ತಕ್ಕಪಾಠ ಕಲಿಸಿತ್ತು. ಆಪರೇಷನ್ ಸಿಂಧೂರ ಮೂಲಕ ಭಾರತ ಕೊಟ್ಟ ಏಟಿಗೆ ಪಾಕಿಸ್ತಾನ ಚಿಂದಿ ಚಿತ್ರಾನವಾಗಿದೆ. ಇನ್ನೂ ಸಿಂಧೂ ನದಿ ನೀರು ಒಪ್ಪಂದ ಅಮಾನತಿನಲ್ಲಿಟ್ಟು ಪಾಕಿಸ್ತಾನ ವಿಲವಿಲ ಒದ್ದಾಡುವಂತೆ ಮಾಡಿದೆ.
ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ನೀರು ರಿಲೀಸ್
ಸಿಂಧೂ ನದಿ ನೀರು ಬಿಡದಿದ್ದಕ್ಕೆ ಪಾಕಿಸ್ತಾನ ಅಕ್ಷರಶಃ ಕಂಗಾಲಾಗಿ ಹೋಗಿತ್ತು. ಇಷ್ಟು ದಿನ ಕೃಷಿಗೆ ಬೆಳೆ ಇಲ್ಲದೇ, ಕುಡಿಯಲು ನೀರಿಲ್ಲದೇ ಪಾಕ್ನ ಪಂಜಾಬ್ ಪ್ರಾಂತ್ಯ ಸೇರಿ ಹಲವೆಡೆ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಮತ್ತೆ ಭಾರತ ಪಾಕಿಸ್ತಾನಕ್ಕೆ ಜಲದಾಳಿ ಮಾಡಿದೆ..ಪಾಕಿಸ್ತಾನಕ್ಕೆ ದೀಢಿರ್ ಅಂತ ಪ್ರವಾಹ ಸೃಷ್ಟಿಸಿ ಶಾಕ್ ನೀಡಿದೆ.
ಜಮ್ಮು-ಕಾಶ್ಮೀರದಲ್ಲಿ ಭಾರಿ ಮಳೆಯಾಗ್ತಿದೆ. ಇದ್ರಿಂದ ಚೆನಾಬ್ ನದಿ ಉಕ್ಕಿ ಹರಿಯುತ್ತಿದೆ. ರಾಂಬನ್ ಜಿಲ್ಲೆಯ ಬಾಗ್ಲಿಹಾರ್ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಈಗ ಪಾಕಿಸ್ತಾನದಲ್ಲಿ ಸಡನ್ ಆಗಿ ರಣಪ್ರವಾಹ ಸೃಷ್ಟಿಯಾಗಿದೆ.
ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿಗೆ ನಿರ್ಮಿಸಲಾದ ಸಲಾಲ್ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಎರಡೂ ಅಣೆಕಟ್ಟಿನಿಂದ ನೀರು ಬಿಟ್ಟಿದ್ದಕ್ಕೆ ಪಾಕಿಸ್ತಾನದ ತಗ್ಗುಪ್ರದೇಶಗಳಿ ನೀರು ನುಗ್ಗಿದೆ. ಸಾವಿರಾರು ಜನ ಅತಂತ್ರರಾಗಿದ್ದಾರೆ.
ಪಾಕಿಸ್ತಾನಕ್ಕೆ ಯಾವುದೇ ಮಾಹಿತಿ ನೀಡದೇ ಭಾರತ ಭಾರಿ ಪ್ರಮಾಣದ ನೀರು ರಿಲೀಸ್ ಮಾಡ್ತಿದೆ. ಇದ್ರಿಂದ ಪಾಕಿಸ್ತಾನ ಕಂಗಾಲಾಗಿ ಹೋಗಿದೆ. ಇನ್ನೂ ಮೊನ್ನೆ ತಾನೇ ಪಾಕ್ ಪಿಎಂ ಶೆಹಬಾಜ್ ಷರೀಫ್, ಮೋದಿ ಜೊತೆ ಮಾತಾಡಬೇಕು ಅಂತ ಸೌದಿ ರಾಜಕುಮಾರ್ ಬಳಿ ಅಂಗಲಾಚಿದ್ದ. ಈ ಬೆನ್ನಲ್ಲೇ ಮತ್ತೆ ಭಾರತ ಜಲಾಸ್ತ್ರ ಪ್ರಯೋಗಿಸಿ ಪಾಕ್ಗೆ ದೊಡ್ಡ ಶಾಕ್ ನೀಡಿದೆ.

