ಟೆಹ್ರಾನ್: ಇರಾನಿನ ವಿರುದ್ಧದ ದಾಳಿ ಮರುಕಳಿಸಿದರೆ ಅಮೆರಿಕಕ್ಕೆ ಐತಿಹಾಸಿಕ ಪಾಠ ಕಲಿಸುವುದಾಗಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(ಐಆರ್ಜಿಸಿ)ಯ ಮುಖ್ಯ ಕಮಾಂಡರ್ ಮೇ| ಜ| ಮುಹಮ್ಮದ್ ಪಕ್ಪೋರ್ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.
ಖತರ್ ಮತ್ತು ಇರಾಕ್ ನಲ್ಲಿರುವ ಅಮೆರಿಕ ಸೇನಾ ನೆಲೆಯ ಮೇಲೆ ಸೋಮವಾರ ರಾತ್ರಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
`ಅಮೆರಿಕಕ್ಕೆ ನಮ್ಮ ಸಂದೇಶ ಸ್ಪಷ್ಟವಾಗಿದೆ. ಸರ್ವಶಕ್ತನಾದ ದೇವರನ್ನು ಅವಲಂಬಿಸಿ ಮತ್ತು ಇರಾನಿನ ಜನರ ಬೆಂಬಲದಿಂದ ಇರಾನ್ ರಾಷ್ಟ್ರವು ಯಾವುದೇ ಸಂದರ್ಭದಲ್ಲೂ ತನ್ನ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆಯ ಉಲ್ಲಂಘನೆಗೆ ಸೂಕ್ತ ಉತ್ತರ ನೀಡದೆ ಬಿಡುವುದಿಲ್ಲ' ಎಂದು ಅವರು ಹೇಳಿದ್ದಾರೆ.




