HEALTH TIPS

ವಿಶ್ವದಲ್ಲಿ Islam ವೇಗವಾಗಿ ಬೆಳೆಯುತ್ತಿದೆ, 2ನೇ ಸ್ಥಾನದಲ್ಲಿ Christianity; Hindu ಧರ್ಮಕ್ಕೆ ಎಷ್ಟನೇ ಸ್ಥಾನ?

ನವದೆಹಲಿ: ವಿಶ್ವದಲ್ಲಿ ಇಸ್ಲಾಂ ವೇಗವಾಗಿ ಬೆಳೆಯುತ್ತಿದ್ದು, ಕ್ರಿಶ್ಚಿಯಾನಿಟಿ ಎರಡನೇ ಸ್ಥಾನದಲ್ಲಿದೆ ಎಂದು ಪ್ಯೂ (Pew) ವರದಿ ಮಾಡಿದೆ.

ಇಸ್ಲಾಂ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2010 ಮತ್ತು 2020 ರ ನಡುವಿನ 10 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು 347 ಮಿಲಿಯನ್‌ ರಷ್ಟು ಬೆಳೆದಿದೆ ಎಂದು ಪ್ಯೂ ಸಂಶೋಧನಾ ಕೇಂದ್ರದ ವರದಿ ತಿಳಿಸಿದೆ.

ವರದಿಯ ಪ್ರಕಾರ, ಕ್ರಿಶ್ಚಿಯಾನಿಟಿ ಎರಡನೇ ವೇಗವಾಗಿ ಬೆಳೆಯುತ್ತಿರುವ ಗುಂಪಾಗಿದ್ದು, ನಂತರದ ಸ್ಥಾನ ಯಾವುದೇ ಧಾರ್ಮಿಕ ಸಂಬಂಧವಿಲ್ಲದ ಜನ ಸಂಖ್ಯೆ ಇರುವುದು ವಿಶೇಷವಾಗಿದೆ.

ಜೂನ್‌ 9 ರಂದು ಪ್ರಕಟವಾದ ಪ್ಯೂನ ಜಾಗತಿಕ ಧಾರ್ಮಿಕ ಭೂದೃಶ್ಯ ವರದಿಯು, ಜನಸಂಖ್ಯಾ ಬೆಳವಣಿಗೆಯು ಜಾಗತಿಕ ಧಾರ್ಮಿಕ ಭೂದೃಶ್ಯದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಬಹಿರಂಗಪಡಿಸುತ್ತದೆ.

ಇದು ಮುಖ್ಯವಾಗಿ ಏಳು ವರ್ಗಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಪೈಕಿ ಕ್ರಿಶ್ಚಿಯನ್ನರು, ಮುಸ್ಲಿಮರು, ಹಿಂದೂಗಳು, ಬೌದ್ಧರು, ಯಹೂದಿಗಳು, ಇತರ ಧರ್ಮಗಳಿಗೆ ಸೇರಿದ ಜನರು ಮತ್ತು ಧಾರ್ಮಿಕವಾಗಿ ಸಂಬಂಧವಿಲ್ಲದವರು ಎಂದು ವಿಂಗಡಿಸಲಾಗಿದೆ.

Islam ವೇಗವಾಗಿ ಬೆಳೆಯುತ್ತಿದೆ

ಇಸ್ಲಾಂ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, 2010 ಮತ್ತು 2020 ರ ನಡುವಿನ 10 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು 347 ಮಿಲಿಯನ್‌ ರಷ್ಟು ಬೆಳೆದಿದೆ. ಮುಸ್ಲಿಮರ ಸಂಖ್ಯೆಯಲ್ಲಿನ ಏರಿಕೆಯು ಇತರ ಎಲ್ಲಾ ಧರ್ಮಗಳಿಗಿಂತ ಹೆಚ್ಚಾಗಿದೆ ಮತ್ತು ಜಾಗತಿಕವಾಗಿ ಮುಸ್ಲಿಂ ಜನಸಂಖ್ಯೆಯ ಪಾಲು ಶೇ.1.8 ರಿಂದ ಶೇ. 25.6 ಪ್ರತಿಶತಕ್ಕೆ ಏರಿದೆ ಎಂದು ವರದಿ ಹೇಳುತ್ತದೆ.

ವಯಸ್ಸಿನ ವಿವರ 2020 ರಲ್ಲಿ, ಮುಸ್ಲಿಮರು ತಮ್ಮ ಜನಸಂಖ್ಯೆಯಲ್ಲಿ ಅತಿ ಹೆಚ್ಚು ಮಕ್ಕಳನ್ನು ಹೊಂದಿದ್ದರು ಎಂದು ಅಧ್ಯಯನವು ಹೇಳುತ್ತದೆ (ವಿಶ್ವಾದ್ಯಂತ ಎಲ್ಲಾ ಮುಸ್ಲಿಮರಲ್ಲಿ ಶೇಕಡಾ 33 ರಷ್ಟು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು).

ವಿಶ್ವದ ಹತ್ತರಲ್ಲಿ ನಾಲ್ಕು ಮುಸ್ಲಿಮರು ಉಪ-ಸಹಾರನ್‌ ಆಫ್ರಿಕಾ ಮತ್ತು ಮಧ್ಯಪ್ರಾಚ್ಯ-ಉತ್ತರ ಆಫ್ರಿಕಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಎಂಬ ಅಂಶದೊಂದಿಗೆ ಮುಸ್ಲಿಮರ ಯೌವ್ವನವು ಸಂಬಂಧ ಹೊಂದಿದೆ – ತುಲನಾತ್ಮಕವಾಗಿ ಯುವ ಜನಸಂಖ್ಯೆಯನ್ನು ಹೊಂದಿರುವ ಸ್ಥಳಗಳು ಎಂದು ಅದು ಹೇಳುತ್ತದೆ.

ಕ್ರಿಶ್ಟಿಯಾನಿಟಿ ತೀವ್ರ ಕುಸಿತ

ಉಳಿದಂತೆ ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಿನ ಪಟ್ಟಿಯಲ್ಲಿ ಕ್ರಿಶ್ಚಿಯಾನಿಟಿ ಎರಡನೇ ಸ್ಥಾನದಲ್ಲಿದೆ. ಕ್ರಿಶ್ಚಿಯನ್ನರ ಸಂಖ್ಯೆ 122 ಮಿಲಿಯನ್‌ ಏರಿಕೆಯಾಗಿ 2.3 ಬಿಲಿಯನ್‌ ತಲುಪಿದೆ. ಆದಾಗ್ಯೂ, ವಿಶ್ವದ ಜನಸಂಖ್ಯೆಯಲ್ಲಿ ಅವರ ಪಾಲು ಶೇ.28.8ಕ್ಕೆ ಇಳಿದಿದೆ. ಅದಾಗ್ಯೂ ಇಸ್ಲಾಂ ನಂತರ ಎರಡನೇ ಸ್ಥಾನದಲ್ಲಿ ಕ್ರಿಶ್ಟಿಯಾನಿಟಿ ಇದೆ ಎಂದು ವರದಿ ಹೇಳುತ್ತದೆ.

ಇದು ಪ್ರಾಥಮಿಕವಾಗಿ ಕ್ರೈಸ್ತೇತರ ಜನಸಂಖ್ಯೆಯ ಬೆಳವಣಿಗೆ ಮತ್ತು ನಂಬಿಕೆಯನ್ನು ತೊರೆದವರ ಬೆಳವಣಿಗೆಯಿಂದಾಗಿ ಸಂಭವಿಸಿದೆ. ಹೆಚ್ಚಿನ ಹಿಂದಿನ ಕ್ರೈಸ್ತರು ಇನ್ನು ಮುಂದೆ ಯಾವುದೇ ಧರ್ಮದೊಂದಿಗೆ ಗುರುತಿಸಿಕೊಳ್ಳುವುದಿಲ್ಲ, ಆದರೆ ಕೆಲವರು ಈಗ ಬೇರೆ ಧರ್ಮದೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.

ಪ್ಯೂ ಪ್ರಕಾರ, ಯುರೋಪ್‌, ಉತ್ತರ ಅಮೆರಿಕಾ, ಅಮೆರಿಕಾಗಳು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಕ್ರಿಶ್ಚಿಯಾನಿಟಿ ಕುಸಿತ ದಾಖಲಾಗಿದೆ. ಉಪ-ಸಹಾರನ್‌ ಆಫ್ರಿಕಾದಲ್ಲಿ ಅತ್ಯಂತ ಯುವಕರಿಂದ ಹಿಡಿದು ಯುರೋಪಿನಲ್ಲಿ ಕನಿಷ್ಠ ಮಟ್ಟಕ್ಕೆ ಅನೇಕ ಪ್ರದೇಶಗಳಲ್ಲಿ ಕ್ರಿಶ್ಚಿಯನ್ನರು ದೊಡ್ಡ ಉಪಸ್ಥಿತಿಯನ್ನು ಹೊಂದಿದ್ದಾರೆ.

3ನೇ ಸ್ಥಾನದಲ್ಲಿ ನೋನ್ಸ್

ಇನ್ನು ನೋನ್ಸ್ ಮೂರನೇ ಅತಿದೊಡ್ಡ ಬೆಳೆಯುತ್ತಿರುವ ಗುಂಪಾಗಿ ಸ್ಥಾನ ಪಡೆದಿದೆ, ಧಾರ್ಮಿಕವಾಗಿ ಸಂಬಂಧವಿಲ್ಲದ ಜನರ ಸಂಖ್ಯೆ 270 ಮಿಲಿಯನ್‌ನಿಂದ 1.9 ಬಿಲಿಯನ್‌ಗೆ ಏರಿದೆ. ವಿಶ್ವ ಜನಸಂಖ್ಯೆಯಲ್ಲಿ ಇವರ ಪಾಲು ಸುಮಾರುಶೇ. 24.2ಕ್ಕೆ ಏರಿದೆ.

4ನೇ ಸ್ಥಾನದಲ್ಲಿ ಹಿಂದೂ ಧರ್ಮ

ಹಿಂದೂಗಳು ವಿಶ್ವ ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವರದಿಯ ಪ್ರಕಾರ ಹಿಂದೂಗಳು ವಿಶ್ವದ ಒಟ್ಟಾರೆ ಜನಸಂಖ್ಯೆಯಷ್ಟೇ ದರದಲ್ಲಿ ಬೆಳೆದಿದ್ದಾರೆ. ವೇಗವಾಗಿ ಬೆಳೆಯುತ್ತಿರುವ ಪಟ್ಟಿಯಲ್ಲಿ ಈ ಹಿಂದೂ ಧರ್ಮ ನಾಲ್ಕನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ, ಹಿಂದೂಗಳ ಸಂಖ್ಯೆ 126 ಮಿಲಿಯನ್‌ ಏರಿಕೆಯಾಗಿ 1.2 ಬಿಲಿಯನ್‌ ತಲುಪಿದೆ. ಜಾಗತಿಕ ಜನಸಂಖ್ಯೆಯ ಅನುಪಾತದಲ್ಲಿ, ಹಿಂದೂಗಳು ಶೇಕಡಾ 14.9 ರಷ್ಟಿದ್ದಾರೆ – 2010 ಕ್ಕೆ ಹೋಲಿಸಿದರೆ (ಶೇಕಡಾ 15) ಸ್ವಲ್ಪ ಕುಸಿತವಾಗಿದೆ. ಹಿಂದೂಗಳು 15 ರಿಂದ 49 ವರ್ಷ ವಯಸ್ಸಿನ (ಶೇ. 55) ವಯಸ್ಸಿನವರ ನಡುವೆ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದಾರೆ. ನಂತರ ಶೇ. 33 ರಷ್ಟು ಯುವಕರು ಇದ್ದಾರೆ.

ಯಹೂದಿಗಳ ಸಂಖ್ಯೆ ಏರಿಕೆ

ಆ 10 ವರ್ಷಗಳಲ್ಲಿ ಯಹೂದಿ ಜನಸಂಖ್ಯೆಯು ಸುಮಾರು ಆರು ಪ್ರತಿಶತದಷ್ಟು ಹೆಚ್ಚಾಗಿದೆ. ಅಂದರೆ 14 ಮಿಲಿಯನ್‌ನಿಂದ 15 ಮಿಲಿಯನ್‌ ಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ. 2020 ರ ಹೊತ್ತಿಗೆ, ಶೇಕಡಾ 45.9 ಯಹೂದಿಗಳು ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದಾರೆ. ಇದು ದೇಶವೊಂದರ ಅತಿ ಹೆಚ್ಚು ಯಹೂದಿ ಜನಸಂಖ್ಯೆಯಾಗಿದೆ. ಇದರ ನಂತರ ಉತ್ತರ ಅಮೆರಿಕಾದಲ್ಲಿ ಶೇಕಡಾ 41.2 ರಷ್ಟು ಯಹೂದಿ ಜನರು ವಾಸಿಸುತ್ತಿದ್ದಾರೆ.

ಭೌದ್ಧ ಧರ್ಮ

ವರದಿಯ ಪ್ರಕಾರ, 2020 ರಲ್ಲಿ ಒಂದು ದಶಕಕ್ಕೂ ಹಿಂದಿನದಕ್ಕಿಂತ ಕಡಿಮೆ ಸಂಖ್ಯೆಯನ್ನು ಹೊಂದಿರುವ ಏಕೈಕ ಪ್ರಮುಖ ಧಾರ್ಮಿಕ ಗುಂಪು ಎಂದರೆ ಅದು ಬೌದ್ಧರು. ಜಗತ್ತಿನಲ್ಲಿ ಬೌದ್ಧರ ಸಂಖ್ಯೆ ಶೇಕಡಾ 0.8 ರಷ್ಟು ಕಡಿಮೆಯಾಗಿದೆ. ಯಹೂದಿಗಳು ಮತ್ತು ಬೌದ್ಧರು ಅತಿ ಹೆಚ್ಚು ವೃದ್ಧರನ್ನು ಹೊಂದಿದ್ದಾರೆ. ಪ್ರತಿ ಗುಂಪಿನಲ್ಲಿ ಶೇ. 36 ರಷ್ಟು ಜನರು 50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ ಎಂದು ಪ್ಯೂ ವರದಿ ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries