HEALTH TIPS

NEET-UG 2025: ಮೊಬೈಲ್ ಕವರ್ ಮಾರಿಕೊಂಡೇ 'ನೀಟ್' ಪರೀಕ್ಷೆಯಲ್ಲಿ 549 ಅಂಕ ಗಳಿಸಿದ ಜೆಮ್ ಶೆಡ್ ಪುರ ಯುವಕ!

ರಾಂಚಿ: ರಸ್ತೆ ಬದಿಯ ಸಣ್ಣ ಅಂಗಡಿಯೊಂದರಲ್ಲಿ ಮೊಬೈಲ್ ಫೋನ್ ಕವರ್ ಮಾರಾಟ ಮಾಡುವ ಜೆಮ್ ಶೆಡ್ ಪುರದ 20 ವರ್ಷದ ರೊಹಿತ್ ಕುಮಾರ್, ರಾಷ್ಟ್ರೀಯ ಅರ್ಹತಾ ಪ್ರವೇಶ ಪ್ರವೇಶ ಪರೀಕ್ಷೆ (NEET-UG)ಯಲ್ಲಿ 549 ಅಂಕ ಗಳಿಸಿದ್ದಾರೆ. 12, 484 ಆಲ್ ಇಂಡಿಯಾ RANK ನೊಂದಿಗೆ ಈಗ ಜಾರ್ಖಂಡ್ ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುುವ ವಿಶ್ವಾಸದಲ್ಲಿದ್ದಾರೆ.

ಒಂದು ಕಾಲದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಂದೆ, ಈಗ ಅಣ್ಣನೊಂದಿಗೆ ಸೇರಿ ಒಂದು ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಆರಂಭಿಸಿ, 800 ರೂ.ಗಳ ಸಾಧಾರಣ ಶುಲ್ಕದೊಂದಿಗೆ ಖಾಸಗಿ ಸಂಸ್ಥೆಗೆ ಸೇರಿದ್ದೆ. 10 ನೇ ತರಗತಿಯ ನಂತರ ಕೋವಿಡ್-19 ಸಾಂಕ್ರಾಮಿಕದಿಂದ ಮೆಡಿಕಲ್ ಸ್ಟೋರ್ ಒಂದರಲ್ಲಿ ಕೆಲಸ ಮಾಡಬೇಕಾಯಿತು. ಇದು ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿಯನ್ನು ಹುಟ್ಟಿಸಿತು ಎಂದು ಕುಮಾರ್ ಹೇಳಿಕೊಂಡರು.

ಆರಂಭದಲ್ಲಿ NEET ಬಗ್ಗೆ ಏನೂ ತಿಳಿಯದ ರೋಹಿತ್ 11 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿದ್ದು, ಕೆಲಸ ಮತ್ತು ಅಧ್ಯಯನದ ಹೊರತಾಗಿಯೂ ಬೋರ್ಡ್ ಪರೀಕ್ಷೆಗಳಲ್ಲಿ ಅಗ್ರಸ್ಥಾನದಲ್ಲಿ ಯಶಸ್ವಿಯಾಗಿದ್ದಾರೆ. ಹಗಲಿನಲ್ಲಿ ಮೊಬೈಲ್ ಕವರ್‌ಗಳನ್ನು ಮಾರಾಟ ಮಾಡುತ್ತಾರೆ. ತಡರಾತ್ರಿಯವರೆಗೆ ಅಧ್ಯಯನ ಮಾಡುತ್ತಾರೆ. ಕೆಲವೊಂದು ಸಲ ಬೆಳಿಗ್ಗೆ 3 ಗಂಟೆಯವರೆಗೆ ಎಚ್ಚರವಾಗಿರುತ್ತಾರೆ, ಮರುದಿನ ಬೆಳಿಗ್ಗೆ 7 ಗಂಟೆಗೆ ಮತ್ತೆ ಅಧ್ಯಯನ ಪ್ರಾರಂಭಿಸುತ್ತಾರೆ.

NEET ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇನೆ ಎಂಬ ವಿಶ್ವಾಸವಿದ್ದರೂ, ಇಷ್ಟು ಚೆನ್ನಾಗಿ ಸ್ಕೋರ್ ಮಾಡುತ್ತೇನೆ ಎಂದು ಊಹಿಸಿರಲಿಲ್ಲ. ಮಧ್ಯಾಹ್ನದವರೆಗೆ ಅಧ್ಯಯನ ಮಾಡಿದ್ದೆ. ತದನಂತರ 12 ರಿಂದ 4 ಗಂಟೆಗೆ ಅಂಗಡಿಯಲ್ಲಿ ಕೆಲಸ ಮಾಡಿದ್ದೆ. ಮನೆಗೆ ಹಿಂತಿರುಗಿ ಮತ್ತೆ ಮಧ್ಯರಾತ್ರಿಯವರೆಗೆ ಓದುವುದನ್ನು ಮುಂದುವರೆಸಿದ್ದೆ. ಈ ಯಶಸ್ಸಿಗೆ ತಮ್ಮ ಸಹೋದರನ ಬೆಂಬಲ ಮತ್ತು ಉಚಿತ ತರಬೇತಿ ನೀಡಿದ Physics Wallah ಅವರನ್ನು ನೆನಪಿಕೊಂಡರು.

ಮೊಬೈಲ್ ಕವರ್‌ ಮಾರಾಟ ಮಾಡುವುದರಿಂದ ದಿನಕ್ಕೆ ಸರಾಸರಿ 500 ರೂ ಗಳಿಸುತ್ತೇವೆ. Physics Wallah ನನಗೆ ತರಬೇತಿಗಾಗಿ ಯಾವುದೇ ಶುಲ್ಕ ಪಡೆಯಲಿಲ್ಲ. ಎರಡನೇ ಪ್ರಯತ್ನದಲ್ಲಿ ನನ್ನ ಕಾರ್ಯಕ್ಷಮತೆಯ ಆಧಾರದ ಮೇಲೆ ನನಗೆ ಉಚಿತ ಬ್ಯಾಚ್ ನೀಡಲಾಯಿತು. ಉಚಿತ ಯೂಟ್ಯೂಬ್ ಸೆಷನ್‌ಗಳಿಗೂ ಹಾಜರಾಗಿ ತರಬೇತಿ ಪಡೆದಿದ್ದಾಗಿ ಅವರು ತಿಳಿಸಿದರು.

ಎನ್‌ಸಿಇಆರ್‌ಟಿ ಪಠ್ಯಕ್ರಮ ಅನುಸರಿಸುವುದು, ಸಂಪೂರ್ಣವಾಗಿ ಅಭ್ಯಾಸ ಮಾಡುವುದು ಮತ್ತು ನಿಯಮಿತವಾಗಿ ರಿವೈಸ್ ಮಾಡಿಕೊಳ್ಳುವುದರ ಮಹತ್ವವನ್ನು ಅವರು ತಿಳಿಸಿದರು. ಯಾರೇ ಆಗಲಿ ಎನ್‌ಸಿಇಆರ್‌ಟಿ ಪುಸ್ತಕಗಳ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಪಠ್ಯಕ್ರಮವನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಅಭ್ಯಾಸ, ಪುನರ್ ಮನನ ಅತ್ಯಗತ್ಯ ಎಂದರು.

Physics Wallah ಸಂಸ್ಥಾಪಕ ಮತ್ತು ಸಿಇಒ ಅಲಾಖ್ ಪಾಂಡೆ ರೋಹಿತ್ ಅವರ ಅಂಗಡಿಗೆ ಭೇಟಿ ನೀಡಿ ಅಭಿನಂದಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ರೋಹಿತ್ ಅವರನ್ನು ಪಾಂಡೆ ಅಪ್ಪಿಕೊಳ್ಳುವುದನ್ನು ತೋರಿಸುತ್ತದೆ ಮತ್ತು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಪ್ರಶಂಸಿಸುತ್ತಾರೆ. ಅಧ್ಯಯನವು ಒಂದು ಆಯ್ಕೆಯಲ್ಲ, ಇದು ಅಗತ್ಯ ಎಂಬುದು ಅವರಂತಹ ಮಕ್ಕಳಿಗೆ ಇದು ಸಾಕ್ಷಿಯಾಗಿದೆ. ಅಂತಹ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ಭೇಟಿಯಾಗುವುದು ನಿಜವಾಗಿಯೂ ಸಂತೋಷವಾಗಿದೆ" ಎಂದು ಪಾಂಡೆ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries