HEALTH TIPS

PhonePe: ಹೊಸ ಸೇವೆ ಪ್ರಾರಂಭ: 123PAY ನೊಂದಿಗೆ ಸುಲಭ ಪಾವತಿ.. ಯಾರಿಗೆಲ್ಲಾ ಲಾಭ? ಬಳಕೆ ಹೇಗೆ?

ಇಂತ್ತೀಚೆಗೆ ಅತಿ ಹೆಚ್ಚಾಗಿ ಡಿಜಿಟಲ್ ಪಾವತಿಗಳನ್ನು ಬಳಕೆ ಮಾಡಿಕೊಳ್ಳತ್ತಾರೆ. ಆದರೆ ಇದೀಗ ಫೋನ್‌ ಪೇ ಇಂಟರ್ನೆಟ್ ಇಲ್ಲದೇ ಪಾವತಿ ಮಾಡುವ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಅದೇ ರಾಷ್ಟ್ರೀಯ ಪಾವತಿ ನಿಗಮ (NPCI) 123PAY ಸೇವೆ.ಇದರಿಂದ ಯಾರಿಗೆಲ್ಲಾ ಲಾಭ..? ಬಳಕೆ ಹೇಗೆ?

ಇಲ್ಲಿದೆ ಹೆಚ್ಚಿನ ಮಾಹಿತಿ.

ರಾಷ್ಟ್ರೀಯ ಪಾವತಿ ನಿಗಮ (NPCI) 123PAY ಸೇವೆಯನ್ನುಫೀಚರ್ ಫೋನ್ (ಸ್ಮಾರ್ಟ್‌ಫೋನ್ ಅಲ್ಲದ, ಸಾಮಾನ್ಯ ಮೊಬೈಲ್ ಫೋನ್) ಬಳಕೆದಾರರು ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೂಲಕವೂ ಸುಲಭವಾಗಿ ಪಾವತಿಗಳನ್ನು ಮಾಡಬಹುದು. ಭಾರತದಲ್ಲಿ ಫೀಚರ್ ಫೋನ್‌ಗಳಿಗಾಗಿ ಯುಪಿಐ ಸೇವೆಗಳನ್ನು ವಿಸ್ತರಿಸಲು ಫಿನ್‌ಟೆಕ್ ದೈತ್ಯ ಫೋನ್‌ಪೇ ಗುಪ್‌ಶಪ್ ಜಿಎಸ್‌ಪೇ ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಕ್ರಮವು ಫೀಚರ್ ಫೋನ್ ಬಳಕೆದಾರರಿಗೆ ವಹಿವಾಟುಗಳನ್ನು ಮಾಡಲು ಸುಲಭಗೊಳಿಸುತ್ತದೆ.

ಫೋನ್‌ಪೇ ಮತ್ತು ಜಿಎಸ್‌ಪೇ

ಫಿನ್‌ಟೆಕ್ ದೈತ್ಯ ಫೋನ್‌ಪೇ ಪಾಲುದಾರಿಕೆಯು ಫೀಚರ್ ಫೋನ್ ಗ್ರಾಹಕರಿಗೆ ಯುಪಿಐ ಪಾವತಿಗಳನ್ನು ತಂದಿದೆ. ಗುಪ್‌ಶಪ್‌ನಿಂದ ಜಿಎಸ್‌ಪೇ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಈ ಘೋಷಣೆ ಬಂದಿದೆ. ಕಂಪನಿಯ ಪ್ರಕಾರ, ಭಾರತದಲ್ಲಿ ಫೀಚರ್ ಫೋನ್ ಬಳಕೆದಾರರು ಫೋನ್‌ಪೇ ಮೂಲಕ ಪೀರ್-ಟು-ಪೀರ್ (ಪಿ 2 ಪಿ) ವರ್ಗಾವಣೆಗಳು ಮತ್ತು ಆಫ್‌ಲೈನ್ ಕ್ಯೂಆರ್ ವಹಿವಾಟುಗಳಂತಹ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ.

ಜಿಎಸ್‌ಪೇ ಎಂದರೇನು?

ಜಿಎಸ್‌ಪೇ ಎಂಬುವುದು ಯುಪಿಐ 123PAY ಆಧಾರಿತ ಮೊಬೈಲ್ ಫೋನ್ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಅನ್ನು 2023 ರಲ್ಲಿ Gupshupಆರಂಭವನ್ನು ಮಾಡಿತ್ತು. GSPay ವೈಶಿಷ್ಟ್ಯ ಫೋನ್‌ಗಳಲ್ಲಿ ಸಂದೇಶ (SMS) ಬಳಸಿಕೊಂಡು ವಹಿವಾಟುಗಳನ್ನು ಮಾಡುವ ಪ್ರಮುಖವಾದ ಕಾರ್ಯವಾಗಿದೆ.

ಎನ್‌ಪಿಸಿಐ ವೈಶಿಷ್ಟ್ಯ ಫೋನ್ ಬಳಕೆದಾರರಿಗೆ ಯುಪಿಐ ವಹಿವಾಟುಗಳಿಗೆ ಪರಿಹಾರವನ್ನು ತಂದ ನಂತರ,ಫೋನ್‌ಪೇ,ಜಿಎಸ್‌ಪೇ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಈ UPI 123PAY ಸೇವೆಯನ್ನು ಪ್ರಾರಂಭಿಸಿತು. ಇದಲ್ಲದೆ, ಫೋನ್‌ಪೇ ಮುಂದಿನ 3 ತಿಂಗಳಲ್ಲಿ ತನ್ನದೇ ಆದ ವೈಶಿಷ್ಟ್ಯ-ಫೋನ್ ಆಧಾರಿತ UPI ಪಾವತಿ ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

UPI 123PAY ಗಾಗಿ UPI ಐಡಿಯನ್ನು ಹೇಗೆ ರಚಿಸುವುದು?

  • UPI 123PAY ಸೇವೆಯನ್ನು ಬಳಸುವ ಮೊದಲು, ನೀವು UPI ಐಡಿಯನ್ನು ರಚಿಸಬೇಕಾಗುತ್ತದೆ. ಫೀಚರ್ ಫೋನ್ ಬಳಕೆದಾರರು *99# ಅನ್ನು ಡಯಲ್ ಮಾಡುವ ಮೂಲಕ ಪಾವತಿಗಳನ್ನು ಮಾಡಬಹುದು. ಇದಕ್ಕಾಗಿ, ಮೊದಲು ನಿಮ್ಮ ಫೋನ್‌ನಿಂದ *99# ಅನ್ನು ಡಯಲ್ ಮಾಡಿ.
  • ಇಲ್ಲಿ ನಿಮ್ಮಗೆ ಹಲವು ಆಯ್ಕೆಗಳನ್ನು ಇರುತ್ತವೆ ಅದರಲ್ಲಿ ನಿಮ್ಮ ಬ್ಯಾಂಕ್ ಹೆಸರನ್ನು ಆಯ್ಕೆಮಾಡಿ.
  • ಈಗ ನಿಮ್ಮ ಡೆಬಿಟ್ ಕಾರ್ಡ್‌ನ ಕೊನೆಯ 6 ಅಂಕೆಗಳನ್ನು ನಮೂದನೆಯನ್ನು ಮಾಡಿ.
  • ಅದರ ನಂತರ, ನಿಮ್ಮ UPI ಪಿನ್ ಅನ್ನು ಕ್ರಿಯೆಟ್ ಮಾಡಿ.

ಈ ಸೇವೆಯು ಡಿಜಿಟಲ್ ಇಂಡಿಯಾ ಒಂದು ದೊಡ್ಡ ಹೆಜ್ಜೆಯಾಗಿದೆ. ಫೀಚರ್ ಫೋನ್ ಬಳಕೆದಾರರನ್ನು ಮುಖ್ಯವಾಹಿನಿಗೆ ತರುವುದರಿಂದ ಆರ್ಥಿಕತೆ ಸುಧಾರಣೆಯಾಗುತ್ತದೆ. ಇದಲ್ಲದೇ ಗ್ರಾಮೀಣ ಪ್ರದೇಶದ ಸಣ್ಣ ಅಂಗಡಿಯವರು ಈಗ ಪಾವತಿಗಳನ್ನು ಸುಲಭವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ಸಂದೇಶದಂತಹ (SMS) ತಂತ್ರಜ್ಞಾನದೊಂದಿಗೆ ಹಣಕಾಸು ವಹಿವಾಟುಗಳು ಸುರಕ್ಷಿತದ ಜೊತೆಗೆ ವೇಗವಾಗಿ ಪಾವತಿ ಪ್ರಕ್ರಿಯೆಗಳು ನಡೆಯುತ್ತದೆ.

ಈ ದಿನ ಯುಪಿಐ ಸೇವೆಗಳು ಬಂದ್!

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳನ್ನು ಜನರು ಹೆಚ್ಚಾಗಿ ಬಳಕೆಯನ್ನು ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಎಚ್‌ಡಿಎಫ್ ಸಿ (HDFC) ಬ್ಯಾಂಕ್ ತನ್ನ ಗ್ರಾಹಕರಿಗೆ ಶಾಕ್‌ ವಿಷಯವೊಂದನ್ನು ಹೇಳಿದೆ. ಜೂ.8 ರಂದು 4 ಗಂಟೆಗಳ ಕಾಲ ತನ್ನ ಯುಪಿಐ (UPI) ಸೇವೆಗಳು ಲಭ್ಯವಿರುವುದಿಲ್ಲ ಎಂದು ಘೋಷಿಸಿದೆ. ಬ್ಯಾಂಕಿಂಗ್ ಅನುಭವವನ್ನು ಸುಧಾರಿಸಲು ಜೂನ್ 8 ರಂದು ಬೆಳಗ್ಗೆ 2.30 - ಬೆಳಗ್ಗೆ 6.30 ರವರೆಗೆ (4 ಗಂಟೆಗಳು) ಅಗತ್ಯ ಸಿಸ್ಟಮ್ ನಿರ್ವಹಣೆಗಾಗಿ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿಯನ್ನು ಸೂಚಿಸಿತ್ತು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries