ಭುವನೇಶ್ವರ: 'ಒಡಿಶಾದ ಪುರಿಯಲ್ಲಿರುವ ಭಗವಾನ್ ಜಗನ್ನಾಥನ ದರ್ಶನ ಮಾಡುವ ಉದ್ದೇಶದಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಷಿಂಗ್ಟನ್ ಭೇಟಿಯ ಆಹ್ವಾನವನ್ನು ನಿರಾಕರಿಸಿದೆ' ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಭುವನೇಶ್ವರದಲ್ಲಿ ಆಯೋಜನೆಗೊಂಡಿದ್ದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಕೆನಡಾದಲ್ಲಿ ಆಯೋಜನೆಗೊಂಡಿದ್ದ ಜಿ7 ಶೃಂಗದಲ್ಲಿ ಪಾಲ್ಗೊಂಡಿದ್ದೆ.
ಅಲ್ಲಿ ಭೇಟಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನನ್ನನ್ನು ವಾಷಿಂಗ್ಟನ್‌ಗೆ ಆಹ್ವಾನಿಸಿ, ಔತಣ ಕೂಟದಲ್ಲಿ ಪಾಲ್ಗೊಳ್ಳುವಂತೆ ಕೋರಿದರು' ಎಂದಿದ್ದಾರೆ.
'ಅವರ ಆಹ್ವಾನಕ್ಕೆ ಧನ್ಯವಾದ ತಿಳಿಸಿದ ನಾನು, ಒಡಿಶಾದಲ್ಲಿರುವ ಭಗವಾನ್ ಜಗನ್ನಾಥನ ದರ್ಶನಕ್ಕೆ ಹೋಗಲೇಬೇಕರಿವುದರಿಂದ ತಮ್ಮ ಆಹ್ವಾನ ನಿರಾಕರಿಸುತ್ತಿರುವುದಾಗಿ ತಿಳಿಸಿದೆ' ಎಂದಿದ್ದಾರೆ.
ಒಡಿಶಾದಲ್ಲಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಅವರು ₹18,600 ಕೋಟಿಯ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.




