ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ ಕುಕ್ಕ0ಕೂಡ್ಲು ಸನ್ನಿಧಿಯಲ್ಲಿ ಮಂಗಳವಾರ ನಾಗರಪಂಚಮಿ ಪ್ರಯುಕ್ತ ಶ್ರೀ ಕ್ಷೇತ್ರದ ನಾಗನ ಗುಹಾ ಸಾನಿಧ್ಯದಲ್ಲಿ ಹಾಲು ಅಭಿಷೇಕ ಸೀಯಾಳ ಅಭಿಷೇಕ, ಹಾಲು ಪಾಯಸ ನೈವೇದ್ಯ, ನಾಗ ತಂಬಿಲ, ಮಹಾಪೂಜೆಗಳು ನಡೆಯಿತು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯರ ನೇತೃತ್ವದಲ್ಲಿ ವಿಧಿವಿಧಾನಗಳು ನಡೆದವು. ನೂರಾರು ಮಂದಿ ಭಕ್ತರು ಪಾಲ್ಗೊಂಡರು.




.jpg)
.jpg)
