ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ನಾಗರ ಪಂಚಮಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಬೆಳಿಗ್ಗೆ 7ಕ್ಕೆ ನಾಗನಿಗೆ ಎಳನೀರು ಅಭಿಷೇಕ, ಹಾಲಾಭಿಷೇಕ ನಡೆಯಿತು. 8.30ರಿಂದ 9.30ರ ವರೆಗೆ ಪುಷ್ಪ ಮತ್ತು ಸಹೋದರಿಯರಿಂದ ಭಜನೆ, 9.30 ರಿಂದ 11ರ ವರೆಗೆ ನಾರಂಪಾಡಿ ಶ್ರೀಮಹಾಮಾಯಿ ಭಜನಾ ಸಂಘದಿಂದ ಭಜನೆ, 11 ರಿಂದ 12.30ರ ವರೆಗೆ ಅನಂತಪುರ ಶ್ರೀಅನಂತಪದ್ಮನಾಭ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಸೋಮವಾರ ರಾತ್ರಿ ವಿಶೇಷ ರಂಗಪೂಜೆ ಏರ್ಪಡಿಸಲಾಗಿತ್ತು.




.jpg)
.jpg)
.jpg)
