ಮಂಜೇಶ್ವರ: ಇಲ್ಲಿಯ ಹದಿನೆಂಟು ಪೇಟೆಗಳ ದೇವಸ್ಥಾನವೆಂದೇ ಖ್ಯಾತಿ ಪಡೆದ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ಮಂಗಳವಾರ ನಾಗರ ಪಂಚಮಿ ಉತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಸಾವಿರಾರು ಜನರ ಭಾಗವಹಿಸುವಿಕೆಯೊಂದಿಗೆ ನಡೆಯಿತು.
ಬೆಳಿಗ್ಗೆ 6ಕ್ಕೆ ಗರ್ಭಗೃಹದ ಬಾಗಿಲು ತೆರೆದು 7.15ಕ್ಕೆ ನಿರ್ಮಾಲ್ಯ ವಿಸರ್ಜನೆ ಆರತಿ, 10.30ಕ್ಕೆ ಅಭಿಷೇಕ, ಆರತಿ, 11.30ಕ್ಕೆ ಸಾಮೂಹಿಕ ನಾಗಪೂಜೆ,12.30ಕ್ಕೆ ಮಹಾಪೂಜೆ, ಆರತಿ,12.45ಕ್ಕೆ ವಿಶೇಷ ವಾಸುಕೀ ಪೂಜೆ ನಡೆಯಿತು.
ಸಂಜೆ 6.15ಕ್ಕೆ ಗಭಗೃಹದ ಬಾಗಿಲು ತೆರೆದು ರಾತ್ರಿ 8ಕ್ಕೆ ಲಕ್ಷ ಹೂವಿನ ಪೂಜೆ, ರಾತ್ರಿಪೂಜೆ, ಆರತಿ, ಬಾಗಿಲು ಮುಚ್ಚಿ ಉತ್ಸವ ಸಮಾಪ್ತಿಗೊಂಡಿತು.
ನಾಗರ ಪಂಚಮಿ ಪ್ರಯುಕ್ತ ನಾಡಿನ ಉದ್ದಗಲದಿಂದ ಸಾವಿರಾರು ಜನರು ಆಗಮಿಸಿ ತನು ಅರ್ಪಿಸಿ ಕೃತಾರ್ಥರಾದರು.




.jpg)
.jpg)
