ಉಪ್ಪಳ/ಬದಿಯಡ್ಕ: ಉಪ್ಪಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ, ಸೇವಾ ರಸ್ತೆಗಳ(ಸರ್ವಿಸ್ ರೋಡ್) ಉದ್ದಕ್ಕೂ ಯಾವುದೇ ರಕ್ಷಣಾ ಬೇಲಿಗಳಿಲ್ಲದೆ ಹಲವಾರು ಟ್ರಾನ್ಸ್‍ಫಾರ್ಮರ್‍ಗಳನ್ನು(ವಿದ್ಯುತ್ ವಿಚ್ಚೇಧಕ) ಅಳವಡಿಸಲಾಗಿದೆ. ಅನೇಕ ಕಡೆಗಳಲ್ಲಿ, ಕೇಬಲ್‍ಗಳು ನೆಲಕ್ಕೆ ತಾಗುವಷ್ಟು ಕೆಳಮಟ್ಟದಲ್ಲಿ ಜೋಲಾಡುತ್ತಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ.
ನಯಾಬಜಾರ್‍ನಲ್ಲಿ, ಅಂತಹ ಒಂದು ಟ್ರಾನ್ಸ್‍ಫಾರ್ಮರ್‍ನ ಫ್ಯೂಸ್‍ಗಳು ಮತ್ತು ಕೇಬಲ್‍ಗಳು ನೇರವಾಗಿ ನೆಲಕ್ಕೆ ತಾಗಿಕೊಂಡಿವೆ. ಮಳೆಗಾಲದಲ್ಲಿ, ಹಾನಿಗೊಳಗಾದ ಕೇಬಲ್ ನೀರಿಗೆ ಸಂಪರ್ಕಕ್ಕೆ ಬಂದರೆ ಮಾರಣಾಂತಿಕ ಅವಘಡ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸೀತಾಂಗೋಳಿ-ಬದಿಯಡ್ಕ ರಸ್ತೆಯ ನೀರ್ಚಾಲು ಪೇಟೆಯಲ್ಲಿ ಅಪಾಯಕಾರಿಯಾಗಿ ಸ್ವಿಚ್ ಹಾಗೂ ಫ್ಯೂಸ್ ಗಳು ನೇತಾಡುತ್ತಿರುವುದು ಕಂಡುಬಂದಿದೆ.
ನೀರ್ಚಾಲು ಶಾಲೆಯ ಎದುರುಬದಿಯ ವಿದ್ಯುತ್ ಕಂಬವೊಂದರ ರಾತ್ರಿ ದೀಪದ ಸ್ವಿಚ್-ಹಾಗೂ ಫ್ಯೂಸ್ ಬಾಕ್ಸ್ ನೆಲಕ್ಕೆ ತಾಗುವಂತೆ ನೇತಾಡುತ್ತಿದೆ. ದಿನನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿ ಕಿಕ್ಕಿರಿದು ಸೇರುವ ಸ್ಥಳವಾಗಿದ್ದು, ಅರಿಯದ ಕುತೂಹಲದಿಂದ ಆ ಮುಚ್ಚಳವಿಲ್ಲದ ಬಾಕ್ಸ್ ಸ್ಪರ್ಶಿಸಿದಲ್ಲಿ ಜೀವಹಾನಿ ಖಂಡಿತ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿದ್ಯುತ್ ಇಲಾಖೆ ಅಧಿಕೃತರನ್ನು ಪ್ರಶ್ನಿಸಿದಾಗ ಹಾಙರಿಕೆಯ ಉತ್ತರ ನೀಡಿ ನುಣುಚಿಕೊಂಡರು.




.jpg)
.jpg)
.jpg)
