ಕೊಚ್ಚಿ: ಎಂಎಸ್‍ಸಿ ಎಲ್ಸಾ 03 ಹಡಗು ಅಪಘಾತದಲ್ಲಿ ಹೈಕೋರ್ಟ್ ನಿರ್ಣಾಯಕ ಆದೇಶವೊಂದನ್ನು ನೀಡಿದೆ. ವಿಝಿಂಜಂಗೆ ಆಗಮಿಸಿದ ಮತ್ತೊಂದು ಎಂಎಸ್‍ಸಿ ಹಡಗನ್ನು ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶಿಸಿದೆ.
ಹಡಗು ಅಪಘಾತದ ನಂತರ ಸರ್ಕಾರ ಸಲ್ಲಿಸಿದ ಪ್ರಕರಣದಲ್ಲಿ ಹೈಕೋರ್ಟ್ ನಿನ್ನೆ ಈ ಕ್ರಮ ಕೈಗೊಮಡಿದೆ.
ವಿಝಿಂಜಂಗೆ ಆಗಮಿಸಿದ ಎಂಎಸ್‍ಸಿ ಕಂಪನಿಯ ಅಕಿಟೆಟಾ 2 ಹಡಗನ್ನು ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶಿಸಿತು. ಸರ್ಕಾರ ರೂ 9531 ಕೋಟಿ ಪರಿಹಾರವನ್ನು ಕೋರಿ ಸರ್ಕಾರ ಹೈಜಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಈ ಮೊತ್ತವನ್ನು ಠೇವಣಿ ಮಾಡದೆ ಹಡಗನ್ನು ಬಿಡಕೂಡದೆಂದು ಕೋರ್ಟ್ ನಿರ್ದೇಶಿಸಿದೆ.
ಸರ್ಕಾರ ಎಂಎಸ್‍ಸಿ ಕಂಪನಿಯ ವಿರುದ್ಧ ಏಕೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿಬಂದ ನಂತರ ಸರ್ಕಾರ ಪ್ರಕರಣ ದಾಖಲಿಸಿತು ಮತ್ತು ಈಗ ಹೈಕೋರ್ಟ್ ಮಹತ್ವದ ಹಸ್ತಕ್ಷೇಪ ಮಾಡಿದೆ.
ಲೈಬೀರಿಯಾದ ಸರಕು ಹಡಗು ಎಂಎಸ್‍ಸಿ ಎಲ್ಸಾ 3 ಮೇ 24 ರಂದು ಅಪಘಾತಕ್ಕೀಡಾಗಿತ್ತು. ಹಡಗು ಆಲಪ್ಪುಳದ ತೊಟ್ಟಪಳ್ಳಿಯಿಂದ 14.6 ನಾಟಿಕಲ್ ಮೈಲು ಮತ್ತು ಕೊಚ್ಚಿಯಿಂದ 40 ನಾಟಿಕಲ್ ಮೈಲು ದೂರದಲ್ಲಿ ಅವಘಡಕ್ಕೀಡಾಗಿತ್ತು. ಅದರಲ್ಲಿರುವ ರಾಸಾಯನಿಕಗಳು ಮತ್ತು ಇತರ ವಸ್ತುಗಳು ಸಮುದ್ರಕ್ಕೆ ಬೆರೆತುಕೊಂಡಿತು. ಕೇರಳ ಕರಾವಳಿಯ ಮೇಲೆ ದೊಡ್ಡ ಪ್ರಮಾಣದ ಪರಿಸರ ಪರಿಣಾಮ ಬೀರುತ್ತಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದ ಕಾರಣ ನ್ಯಾಯಾಲಯ ಈ ಬೃಹತ್ ಮೊತ್ತದ ದಂಡಕ್ಕೆ ಸೂಚನೆ ನೀಡಿತು.



