ಕಾಸರಗೋಡು: ಪೆರ್ಲದ ಸವಿಹೃದಯದ ಕವಿ ಮಿತ್ರರು ವೇದಿಕೆ ವತಿಯಿಂದ ಆಟಿ ಅಕ್ಷರ ಕೂಟ ಆ. 10ರಂದು ಬೆಳಗ್ಗೆ 9ರಿಂದ ಕಾಸರಗೋಡು ಕೂಡ್ಲು ಗಂಗೆ ರಸ್ತೆಯ ಲಕ್ಷ್ಮೀ ಗೋವಿಂದ ನಿವಾಸದಲ್ಲಿ ಜರುಗಲಿದೆ.
ಬೆಳಗ್ಗೆ 9ರಿಂದ ಬೆದ್ರಂಪಳ್ಳದ ಗಣೇಶ ಭಜನಾ ಮಂಡಳಿ ಮಹಿಳಾ ತಂಡದ ಸದಸ್ಯೆಯರಿಂದ ಭಜನೆ ನಡೆಯುವುದು. 10.30ಕ್ಕೆ ನಡೆಯುವ ಸಮಾರರಂಭದಲ್ಲಿ ಕಲಬುರ್ಗಿ ಆಕಾಶವಾಣಿ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಸಮಾರಂಭ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸದಸ್ಯೆ ಆಯಿಷಾ ಎ.ಎ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ ಆಶಾ ದಿಲೀಪ್ ಸುಳ್ಯಮೆ ಅವರು 'ಆಟಿ ಆಚರಣೆ'ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಡಾ. ಕಿಶೋರ್ ಕುಮಾರ್ ಶೇಣಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಹಿರಿಯ ಹೋಟೆಲ್ ಉದ್ಯಮಿ ಗೋವಿಂದ ನಾಯ್ಕ್ ಅರೆಮಂಗಿಲ ಅವರನ್ನು ಗೌರವಿಸಲಾಗುವುದು.
ಮಧ್ಯಾಹ್ನ 1ಗಂಟೆಗೆ ಗೀತಾ ಗಾಯನ, 2ಗಂಟೆಗೆ ಬಹುಭಾಷಾ ಕವಿ ಕಾವ್ಯ ಸಂವಾದ ನಡೆಯುವುದು. ಕವಿ ರಾಜಾರಾಮ ವರ್ಮ ವಿಟ್ಲ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕವಿ, ಉಪನ್ಯಾಸಕ ರಘು ಇಡ್ಕಿದು ಅಧ್ಯಕ್ಷತೆ ವಹಿಸುವರು. ಬಹುಭಾಷಾ ಕವಿಗೋಷ್ಠಿಯಲ್ಲಿ ಕನ್ನಡ, ತುಳು, ಮಲಯಾಳ, ಕರಾಡ, ಇಂಗ್ಲಿಷ್, ಹಿಂದಿ, ಕುಂದಗನ್ನಡ, ಕೊಂಕಣಿ, ಮರಾಟಿ ಹಾಗೂ ಸಂಸ್ಕøತದಲ್ಲಿ ಕಾವಿತಾವಾಚನ ನಡೆಯುವುದು. ಸಂಜೆ 4ರಿಂದ ಆಟಿ ಹಾಸ್ಯ-ಲಾಸ್ಯ, ಗಾಯನ, ನರ್ತನ ಕಾರ್ಯಕ್ರಮ ನಡೆಯುವುದು.





