ಢಾಕಾ: ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಇಬ್ಬರು ಆಪ್ತರ ವಿರುದ್ಧದ ಆರೋಪಗಳನ್ನು ಬಾಂಗ್ಲಾದೇಶ ಅಂತರರಾಷ್ಟ್ರೀಯ ಅಪರಾಧ ನ್ಯಾಯ ಮಂಡಳಿ ಜುಲೈ 10ರಂದು ನಿರ್ಧಾರ ಮಾಡಲಿದೆ.ಸೋಮವಾರ ಈ ಸಂಬಂಧ ಆದೇಶ ಹೊರಬಿದ್ದಿದೆ.
ಶೇಖ್ ಹಸೀನಾ, ಮಾಜಿ ಗೃಹ ಸಚಿವ ಅಸದ್ ಉದ್ ಜಮಾನ್ ಖಾನ್ ಕಮಾಲ್ ಮತ್ತು ಮಾಜಿ ಪೊಲೀಸ್ ಮಹಾ ನಿರ್ದೇಶಕ ಚೌಧುರಿ ಅಬ್ದುಲ್ಲಾ ಅಲ್ ಮಮುನ್ ವಿರುದ್ಧ ಕೊಲೆ, ಕೊಲೆ ಯತ್ನ, ಕಿರುಕುಳ ನೀಡಿದ ಆರೋಪದಡಿ ಅಪರಾಧ ಪ್ರಕರಣ ದಾಖಲಿಸಲಾಗಿದೆ.
ಮೂವರು ಸದಸ್ಯರ ಪ್ರಾಧಿಕಾರ ಅರ್ಜಿಗಳನ್ನು ವಿಚಾರಣೆ ಮಾಡಲಿದೆ. ಈಗಾಗಲೇ ಮಂಡಳಿ ಮುಂದೆ ಮೂವರ ಪರ ವಕೀಲರು ವಾದ ಮಂಡಿಸಿ ಪ್ರಕರಣ ರದ್ದು ಮಾಡುವಂತೆ ಕೋರಿದ್ದಾರೆ.
ವಿಚಾರಣೆಗೆ ಗೈರಾದ ಕಾರಣ ಕಳೆದ ಬುಧವಾರ ಸ್ಥಳೀಯ ನ್ಯಾಯಾಲಯ ನ್ಯಾಯಾಂಗ ನಿಂದನೆ ಆರೋಪದಡಿ ಶೇಖ್ ಹಸೀನಾ ಅವರಿಗೆ ಆರು ತಿಂಗಳ ಜೈಲು ಶಿಕ್ಷೆಯನ್ನೂ ವಿಧಿಸಿದೆ.




