ಕುಂಬಳೆ: ಕುಂಬಳೆ ಮುಳಿಯಡ್ಕ ನಿವಾಸಿ ಅಬ್ದುಲ್ ರಶೀದ್ ಎಂಬವರನ್ನು ಹಾಡಹಗಲು ಅಪಹರಿಸಿ, ಅವರ ಬ್ಯಾಂಕ್ ಖಾತೆಯಿಂದ18.46ಲಕ್ಷ ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಧರ್ಮತ್ತಡ್ಕ ಚಳ್ಳಂಗಯ ನಿವಾಸಿ ಯೂಸುಫ್ ಇರ್ಷಾದ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಪೇಟೆಯಲ್ಲಿ ಜುಲೈ 6ರಂದು ಘಟನೆ ನಡೆದಿದ್ದು, ಅಬ್ದುಲ್‍ರಶೀದ್ ಅವರನ್ನು ಕಾರಿಗೆ ಬಲವಂತವಾಗಿ ಹತ್ತಿಸಿಕೊಂಡು ಸೀತಾಂಗೋಳಿ ಭಾಗಕ್ಕೆ ಕರೆದೊಯ್ದು, ಅವರ ಬ್ಯಾಂಕ್ ಖಾತೆಯಿಂದ 1846127ರೂ. ನಗದು ವರ್ಗಾಯಿಸಿಕೊಂಡು, ಪೆರ್ಮುದೆ ಪೇಟೆಯಲ್ಲಿ ಇವರನ್ನು ಇಳಿಸಿ ತಂಡ ಪರಾರಿಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಚಳ್ಳಂಗಯ ನಿವಾಸಿ ಸಯ್ಯದ್ ಎಸ್.ಎ ಸೇರಿದಂತೆ ನಾಲ್ವರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು.

