ಕಾಸರಗೋಡು: ಶ್ರೀ ವಿಶ್ವಬ್ರಾಹ್ಮಣ ಸೇವಾ ಸಂಘದ 2024_2025 ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಅವರ ಅಧ್ಯಕ್ಷತೆಯಲ್ಲಿ ಶ್ರೀ ವಿಶ್ವಕರ್ಮ ಮಂದಿರದಲ್ಲಿ ಜರಗಿತು. ಆಡಳಿತ ಸಮಿತಿಯ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ.ಜಿ. ಗಣೇಶ ಆಚಾರ್ಯ ವಾಚಿಸಿದರು. ಕೋಶಾಧಿಕಾರಿ ನಲ್ಕ ಪ್ರವೀಣ ಕುಮಾರ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು.
ಉಪ ಸಮಿತಿಗಳಾದ ಶ್ರೀ ವಿಶ್ವಕರ್ಮ ಮಹಿಳಾ ಸಂಘ ಮತ್ತು ಶ್ರೀ ವಿಶ್ವಕರ್ಮ ಯುವಕ ಸಂಘಗಳ ವಾರ್ಷಿಕ ಮಹಾಸಭೆ ಈ ಸಂದರ್ಭದಲ್ಲಿ ಸಂಯುಕ್ತವಾಗಿ ನಡೆಯಿತು.
ಮಹಿಳಾ ಸಂಘದ ಕಾರ್ಯದರ್ಶಿ ಹೇಮಲತಾ ಗಣೇಶ ಆಚಾರ್ಯ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಗಾಯತ್ರಿ ಭವಾನಿಶಂಕರ ಆಚಾರ್ಯ ಲೆಕ್ಕಪತ್ರ ಮಂಡಿಸಿದರು.
ಯುವಕ ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆರೆಮನೆ ವಸಂತ ಆಚಾರ್ಯ ವಾಚಿಸಿದರು. ಕೋಶಾಧಿಕಾರಿ ಹರಿ ಪ್ರಸಾದ್ ಆಚಾರ್ಯ ಲೆಕ್ಕಪತ್ರ ಮಂಡಿಸಿದರು. ಸಮಿತಿಯನ್ನು ಪುನ ರಚಿಸಲಾಗಿ ಅದ್ಯಕ್ಷರಾಗಿ ಶೀತಲ್ ಕುಮಾರ್ ಆಚಾರ್ಯ, ಕಾರ್ಯದರ್ಶಿ ಹರಿಪ್ರಸಾದ್ ಆಚಾರ್ಯ, ಕೋಶಾಧಿಕಾರಿ ಪುರಂದರ ಆಚಾರ್ಯ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಮಾಜದ ಪುತ್ತಿಗೆ ಗ್ರಾಮ ಪಂಚಾಯತಿ ಸದಸ್ಯೆ ಕಾವ್ಯ ಯಜ್ಞೇಶ ಆಚಾರ್ಯರಿಗೆ ಗೌರವಾರ್ಪಣೆ ನಡೆಯಿತು. ಸಮಾಜದ ಹಿರಿಯರ ಕನಸಾದ ಸಭಾಭವನ ನಿರ್ಮಾಣದ ವಿನಂತಿ ಪತ್ರವನ್ನು ಸಂಘದ ಮಾಜಿ ಅಧ್ಯಕ್ಷ ಕೆ. ಸುರೇಂದ್ರ ಆಚಾರ್ಯ ಮಾತಾ ಜುವೆಲ್ಲರಿ ಬಿಡುಗಡೆಗೊಳಿಸಿದರು.
ಕಲ್ಮಾಡಿ ಸದಾಶಿವ ಆಚಾರ್ಯ, ಪೆರ್ಣೆ ವಿಷ್ಣು ಆಚಾರ್ಯ, ಬಿ. ವಿಘ್ನೇಶ ಆಚಾರ್ಯ, ಬೋವಿಕ್ಕಾನ ಚಂದ್ರಶೇಖರ ಆಚಾರ್ಯ, ಪೆರ್ಣೆ ಮಧುಸೂದನ ಆಚಾರ್ಯ, ಚಂಚಲಾಕ್ಷಿ ಚಂದ್ರಶೇಖರ ಆಚಾರ್ಯ ಹಾಗೂ ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ವೇದಿಕೆಯಲ್ಲಿ ಆಡಳಿತ ಸಮಿತಿಯ ಅದ್ಯಕ್ಷ ಭುವನೇಶ ಆಚಾರ್ಯ, ಉಪಾದ್ಯಕ್ಷ ಸುರೇಶ ಆಚಾರ್ಯ, ಕಾರ್ಯದರ್ಶಿ ಗಣೇಶ ಆಚಾರ್ಯ, ಕೋಶಾಧಿಕಾರಿ ಪ್ರವೀಣ ಕುಮಾರ್ ಆಚಾರ್ಯ, ಯುವಕ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಆಚಾರ್ಯ, ಮಹಿಳಾ ಸಂಘದ ಅಧ್ಯಕ್ಷೆ ವೇದಾವತಿ ಸದಾಶಿವ ಆಚಾರ್ಯ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಕೆರೆಮನೆ ತುಕಾರಾಮ ಆಚಾರ್ಯ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ವೇಣುಗೋಪಾಲ ಆಚಾರ್ಯ ನೆಕ್ರಾಜೆ ವಂದಿಸಿದರು.


