ಕಠ್ಮಂಡು: ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಭಾರತವು ನೇಪಾಳಕ್ಕೆ ₹24 ಕೋಟಿ ಅನುದಾನ ನೀಡಲಿದೆ. ಈ ಸಂಬಂಧ ಒಟ್ಟು 5 ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳಲು ಭಾರತ ಮತ್ತು ನೇಪಾಳ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಭಾರತದ ರಾಯಭಾರ ಕಚೇರಿ, ನೇಪಾಳದ ವಿವಿಧ ಸಚಿವಾಲಯಗಳು ಒಪ್ಪಂದಕ್ಕೆ ಸಹಿ ಹಾಕಿದವು.
ಮಾದೇಶ್ ಮತ್ತು ಸುದರ್‌ಪಶ್ಚಿಮ್ ಪ್ರಾಂತ್ಯಗಳಲ್ಲಿ ಶಾಲಾ ಕಟ್ಟಡಗಳು ಹಾಗೂ ಗಂಡಕಿ ಪ್ರಾಂತ್ಯದಲ್ಲಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಈ ಒಪ್ಪಂದ ಒಳಗೊಂಡಿದೆ.




