ಶಿಮ್ಲಾ: ಈಗಿನ ಯುದ್ಧಭೂಮಿಯಲ್ಲಿ ಡ್ರೋನ್ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆಯನ್ನು ಉಲ್ಲೇಖಿಸಿದ ಇಲ್ಲಿನ ಸೇನಾ ತರಬೇತಿ ಕಮಾಂಡ್‌ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದೇವೇಂದ್ರ ಶರ್ಮಾ, '2030ರ ವೇಳೆಗೆ 33 ಹೊಸ ತಂತ್ರಜ್ಞಾನಗಳನ್ನು ತರಬೇತಿಯಲ್ಲಿ ಅಳವಡಿಸಿಕೊಳ್ಳಲಾಗುವುದು' ಎಂದು ತಿಳಿಸಿದರು.
ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 'ಸೇನಾ ತರಬೇತಿ ಕೇಂದ್ರವು ಕಲಿಕೆಯ ಹಂತದಲ್ಲಿಯೇ ಆಧುನಿಕ ತಂತ್ರಜ್ಞಾನದ ಅಳವಡಿಕೆಗೆ ಒತ್ತು ನೀಡಲಿದೆ' ಎಂದು ತಿಳಿಸಿದ್ದಾರೆ.
'ಸೇನೆಯನ್ನು ಭವಿಷ್ಯದಲ್ಲಿ ಎದುರಾಗುವ ಯುದ್ಧಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಮುಂದಿನ ಐದು ವರ್ಷದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಹಾಗೂ ತರಬೇತಿಗಾಗಿ ₹390 ಕೋಟಿ ವೆಚ್ಚ ಮಾಡಲಾಗುವುದು' ಎಂದು ಹೇಳಿದ್ದಾರೆ.




