ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ: ಪೂರ್ವ ಕಾಂಗೊದ ಚರ್ಚ್‌ವೊಂದರ ಮೇಲೆ ಇಸ್ಲಾಮಿಕ್ ರಾಜ್ಯ ಬೆಂಬಲಿತ ಸಂಘಟನೆಯ ಬಂಡುಕೋರರು ದಾಳಿ ನಡೆಸಿದ್ದು, 38 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಅಲೈಡ್ ಡೆಮಾಕ್ರಟಿಕ್ ಫೋರ್ಸ್‌ನ (ಎಡಿಎಫ್) ಬಂಡುಕೋರರು ಕೋಮಾಂಡದ ಚರ್ಚ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರ ಮೇಲೆ ಭಾನುವಾರ ಮುಂಜಾನೆ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. ಘಟನೆಯ ನಂತರ ಅನೇಕರು ಕಾಣೆಯಾಗಿದ್ದಾರೆ' ಎಂದು ನಗರ ಆಡಳಿತದ ಅಧಿಕಾರಿ ಜೀನ್ ಕ್ಯಾಟೊ ತಿಳಿಸಿದ್ದಾರೆ.




