ವಯನಾಡು: ಸುಲ್ತಾನ್ ಬತ್ತೇರಿಯಲ್ಲಿ ಕಾಡುಹಂದಿಗಳ ತಂಡ ದಾಳಿ ನಡೆಸಿರುವುದು ವರದಿಯಾಗಿದೆ. ಮೂವರು ಯುವಕರಿಗೆ ದಾಳಿಯಲ್ಲಿ ಗಾಯವಾಗಿದೆ.
ಗಾಯಾಳುಗಳು ಒಡಪುಳಂ ಪ್ರದೇಶದ ಬುಡಕಟ್ಟು ಜನಾಂಗದವರು. ಭಾನುವಾರ ಬೆಳಿಗ್ಗೆ 7:30 ರ ಸುಮಾರಿಗೆ ಈ ಘಟನೆ ನಡೆದಿದೆ.
ಮೂವರು ಹತ್ತಿರದ ಅಂಗಡಿಗೆ ಚಹಾ ಸೇವಿಸಲು ತೆರಳುತ್ತಿದ್ದಾಗ ಕಾಡುಹಂದಿಗಳ ಹಿಂಡು ದಾಳಿ ಮಾಡಿದೆ. ಅವರನ್ನು ಹತ್ತಿರದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.





