ಕೀವ್: ರಷ್ಯಾ ಪಡೆಗಳು ರಾತ್ರೋರಾತ್ರಿ 426 ಡ್ರೋನ್‌ಗಳು ಹಾಗೂ 24 ಕ್ಷಿಪಣಿಗಳನ್ನು ದೇಶದತ್ತ ಹಾರಿಸಿದೆ ಎಂದು ಉಕ್ರೇನ್ ವಾಯು ಪಡೆ ಸೋಮವಾರ ತಿಳಿಸಿದೆ.
ದೇಶದತ್ತ ಬಂದ ಕ್ಷಿಪಣಿಗಳು ಹಾಗೂ 224 ಡ್ರೋನ್‌ಗಳನ್ನು ಹೊಡೆದುರುಳಿಸಿದ್ದೇವೆ. ಉಳಿದವು ರಾಡಾರ್ ವ್ಯಾಪ್ತಿಗೆ ಸಿಕ್ಕಿಲ್ಲ ಎಂದು ಹೇಳಿದೆ.
ರಷ್ಯಾ ಸೇನಾ ಪಡೆಗಳು 2022ರ ಫೆಬ್ರುವರಿಯಲ್ಲಿ ಉಕ್ರೇನ್ ಮೇಲೆ ದಾಳಿ ಆರಂಭಿಸಿದ್ದವು. ಆಗಿನಿಂದ, ಉಭಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿವೆ.
ಯುದ್ಧ ನಿಲ್ಲಿಸುವಂತೆ ಉಭಯ ದೇಶಗಳಿಗೆ ಜಾಗತಿಕ ನಾಯಕರು ಒತ್ತಾಯ ಮಾಡುತ್ತಿದ್ದಾರೆ.




