HEALTH TIPS

ಉತ್ತರಾಖಂಡ: ಗಡಿ ಪ್ರದೇಶದ 52 ಗ್ರಾಮಗಳು ರಾಷ್ಟ್ರೀಯ ಪವರ್‌ ಗ್ರಿಡ್‌ಗೆ ಜೋಡಣೆ

ಪಥೋರ್‌ಗಡ್: ಉತ್ತರಾಖಂಡದ ಗಡಿ ಭಾಗದ 52 ಹಳ್ಳಿಗಳ ಜನರು ಸೌರ ಶಕ್ತಿಯನ್ನೇ ಅವಲಂಬಿಸಿದ್ದು, ಅವರಿಗೆ ನಿರಂತರ ವಿದ್ಯುತ್‌ ಪೂರೈಕೆ ಮಾಡುವ ಉದ್ದೇಶದಿಂದ ಉತ್ತರಾಖಂಡ ವಿದ್ಯುತ್ ನಿಗಮವು (ಯುಪಿಸಿಎಲ್‌) ಈ ಗ್ರಾಮಗಳನ್ನು ರಾಷ್ಟ್ರೀಯ ವಿದ್ಯುತ್ ಸಂಪರ್ಕ ಜಾಲಕ್ಕೆ ಸೇರಿಸಿದೆ.

ದರ್ಮ ಕಣಿವೆಯ 20 ಗ್ರಾಮಗಳು, ವ್ಯಾಸ್‌ ಕಣಿವೆಯ 18, ಜೋಹರ್‌ ಕಣಿವೆಯ 14 ಗ್ರಾಮಗಳು ಈ ವ್ಯಾಪ್ತಿಗೆ ಸೇರಲಿವೆ ಎಂದು ಯುಪಿಸಿಎಲ್‌ನ ರುದ್ರಪುರ ವಲಯದ ಮುಖ್ಯ ಎಂಜಿನಿಯರ್‌ ನರೇಂದ್ರ ಸಿಂಗ್ ತೊಲಿಯಾ ತಿಳಿಸಿದ್ದಾರೆ.

ಈ 52 ಗ್ರಾಮಗಳು ಭಾರತ ಮತ್ತು ಚೀನಾ ಗಡಿ ಭಾಗದಲ್ಲಿವೆ. ಕಿರು ಸೌರ ವಿದ್ಯುತ್ ಉತ್ಪಾದನಾ ಯೋಜನೆಗಳ ಮೂಲಕ ಈ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಇದನ್ನು ಉತ್ತರಾಖಂಡದ ನವೀಕರಿಸಬಹುದಾದ ವಿದ್ಯುತ್‌ಚ್ಛಕ್ತಿ ಅಭಿವೃದ್ಧಿ ಏಜೆನ್ಸಿಯು ನಿರ್ವಹಿಸುತ್ತಿದೆ.

'ನೂತನ ಯೋಜನೆಗೆ ಕೇಂದ್ರ ಸರ್ಕಾರವು ₹131.43 ಕೋಟಿ ನೀಡಿದೆ. ಟೆಂಡರ್‌ ಕರೆಯಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಯೋಜನೆ ಮೂಲಕ ಗಡಿಭಾಗದಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೂ ಪ್ರಯೋಜನವಾಗಲಿದೆ' ಎಂದು ನರೇಂದ್ರ ಸಿಂಗ್ ತಿಳಿಸಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries