ಕಾಸರಗೋಡು: ಯಕ್ಷಗಾನ ಪ್ರಸಂಗ ರಚನಾ ಕಮ್ಮಟ ಜುಲೈ 7ರಂದು ಬೆಳಗ್ಗೆ 9.30ಕ್ಕೆ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಭವನದಲ್ಲಿ ಜರರುಗಲಿದೆ. ಪಾರ್ತಿಸುಬ್ಬ ಯಕ್ಷಗಾನ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷ ಕವಿಗಳಾದ ಶ್ರೀಧರ ಡಿ. ಎಸ್. ಕಿನ್ನಿಗೋಳಿ ಹಾಗೂ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮೈಸೂರು ಅವರ ಮಾರ್ಗದರ್ಶನದಲ್ಲಿ ಕಮ್ಮಟ ನಡೆಯಲಿದೆ.
ಅಂದು ಬೆಳಗ್ಗೆ 9.30ಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಮ್ಮಟ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ.
ಇದೇ ಸಂದರ್ಭ ಗಡಿನಾಡು ಕಾಸರಗೋಡಿನ ಹಿರಿಯ ಪ್ರಸಂಗ ಕರ್ತರಾದ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ಕುಂದಾಪುರ ಬೈಂದೂರು ತಾಲುಕಿನ ಫಣಿಗಿರಿ ಪ್ರತಿಷ್ಠಾನವು ಕೊಡಮಾಡುವ ಫಣಿಗಿರಿ ಪ್ರಶಸ್ತಿ-2025 ನೀಡಿ ಗೌರವಿಸಲಿದ್ದಾರೆ. ಯಕ್ಷಗಾನ ದ ಹಿರಿಯ ಕವಿ ಕೀರ್ತಿ ಶೇಷ ಶಿರೂರು ಫಣಿಯಪ್ಪಯ್ಯ ಅವರ 108 ನೆಯ ಜನ್ಮದಿನ ಪ್ರಯುಕ್ತ ಸಂಪೂರ್ಣ ಕಾರ್ಯಕ್ರಮ ಅವರಿಗೆ ಸಮರ್ಪಿತವಾಗಲಿದೆ. ಇದೇ ಸಂದರ್ಭ ಯಕ್ಷಗಾನ ದ್ವನಿ ಸುರುಳಿಗಳ ಸಂರಕ್ಷಕ, ಕಲಾಭಿಮಾನಿ ಯಂ. ಯಲ್. ಭಟ್ ಮರವಂತೆ ಅವರನ್ನು ಸಿರಿಬಾಗಿಲು ಪ್ರತಿಷ್ಠಾನ ವತಿಯಿಂದ ವಿಶೇಷ ವಾಗಿ ಗೌರವಿಸಲಾಗುವುದು. ಯಕ್ಷಗಾನ ಕ್ಷೇತ್ರದಲ್ಲಿ ಅಪರೂಪವಾದ ಈ ಶಿಬಿರದ ಪ್ರಯೋಜನವನ್ನು ಆಸಕ್ತರೆಲ್ಲಾ ಪಡೆದುಕೊಳ್ಳುವಂತೆ ಪ್ರತಿಷ್ಟಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





