ದಾರ್ ಅಲ್-ಬಲಾ: ಗಾಜಾದ ವಿವಿಧೆಡೆ ನೆರವು ಸಾಮಾಗ್ರಿ ಪಡೆಯಲು ಧಾವಿಸುತ್ತಿದ್ದ 73 ಜನರು ಭಾನುವಾರ ಮೃತಪಟ್ಟಿದ್ದಾರೆ.
150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
ಉತ್ತರ ಗಾಜಾದಾಲ್ಲಿಯೇ ಅತಿ ಹೆಚ್ಚು ಸಾವು ಸಂಭವಿಸಿದೆ. ಜಿಕಿಮ್ ಮೂಲಕ ಉತ್ತರ ಗಾಜಾವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ 67 ಮಂದಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ಮತ್ತು ಸ್ಥಳೀಯ ಆಸ್ಪತ್ರೆಗಳು ತಿಳಿಸಿವೆ.
ಇಸ್ರೇಲ್ ಸೇನೆ ಅಥವಾ ಬಂಡುಕೋರರ ದಾಳಿಯಿಂದ ಜನರು ಮೃತಪಟ್ಟಿದ್ದಾರೆಯೇ ಎಂಬುವುದು ಖಚಿತವಾಗಿಲ್ಲ. ಆದರೆ, ಜನರ ಗುಂಪಿನ ಮೇಲೆ ಇಸ್ರೇಲ್ ಸೇನೆ ದಾಳಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಘಟನೆಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

