HEALTH TIPS

ಢಾಕಾದಲ್ಲಿ ನಡೆಯುವ 'ACC ಸಭೆ'ಗೆ ಭಾರತ ಬಹಿಷ್ಕಾರ, 'BCCI' ಭಾಗವಹಿಸದಿರಲು ನಿರ್ಧಾರ

ನವದೆಹಲಿ : ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ವಾರ್ಷಿಕ ಸಾಮಾನ್ಯ ಸಭೆ (AGM) ಢಾಕಾದಲ್ಲಿ ನಡೆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯಾವುದೇ ನಿರ್ಣಯವನ್ನ "ಬಹಿಷ್ಕರಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

ಆರು ತಂಡಗಳ ಏಷ್ಯಾ ಕಪ್, ಟಿ20 ಸ್ವರೂಪದಲ್ಲಿ ನಡೆಯಲಿರುವ ಪಂದ್ಯಾವಳಿಯ ಭವಿಷ್ಯವು ಅನಿಶ್ಚಿತತೆಯಿಂದ ಕೂಡಿದೆ.

ಭಾರತವು ಪಂದ್ಯಾವಳಿಯ ನಿಯೋಜಿತ ಆತಿಥೇಯ ರಾಷ್ಟ್ರವಾಗಿದ್ದು, ACC ಇನ್ನೂ ಪಂದ್ಯಾವಳಿಯ ವೇಳಾಪಟ್ಟಿ ಅಥವಾ ಸ್ಥಳವನ್ನು ಘೋಷಿಸಿಲ್ಲ. ವದಂತಿಗಳ ಪ್ರಕಾರ ಸೆಪ್ಟೆಂಬರ್'ನ್ನು ಪಂದ್ಯಾವಳಿಗೆ ಅನಧಿಕೃತ ವಿಂಡೋ ಎಂದು ಪರಿಗಣಿಸಲಾಗಿದೆ.

ಸಭೆಯು ಜುಲೈ 24 ರಂದು ಢಾಕಾದಲ್ಲಿ ನಡೆಯಲಿದೆ. ಬಾಂಗ್ಲಾದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ, ಸಭೆಗೆ ಪ್ರಯಾಣಿಸಲು ಭಾರತ ನಿರಾಕರಿಸಿತು. ಇತ್ತೀಚೆಗೆ, ಬಿಸಿಸಿಐ ಮತ್ತು ಬಿಸಿಸಿಬಿ ಪರಸ್ಪರ ಭಾರತದ ಬಾಂಗ್ಲಾದೇಶ ಪ್ರವಾಸವನ್ನ ಆಗಸ್ಟ್ 2025ರಿಂದ ಸೆಪ್ಟೆಂಬರ್ 2026 ರವರೆಗೆ ಮುಂದೂಡಲು ನಿರ್ಧರಿಸಿವೆ.

ACC ಗೆ ಪಿಸಿಬಿ ಅಧ್ಯಕ್ಷ ಮತ್ತು ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ನೇತೃತ್ವ ವಹಿಸಿದ್ದಾರೆ. ಮೂಲಗಳ ಪ್ರಕಾರ, ಸಭೆಗೆ ಸಂಬಂಧಿಸಿದಂತೆ ನಖ್ವಿ ಭಾರತದ ಮೇಲೆ "ಅನಗತ್ಯ ಒತ್ತಡ" ಹೇರಲು ಪ್ರಯತ್ನಿಸುತ್ತಿದ್ದಾರೆ. ಬಿಸಿಸಿಐ ಸಂಸ್ಥೆಯ ಅಧ್ಯಕ್ಷರನ್ನು ಸ್ಥಳವನ್ನು ಬದಲಾಯಿಸುವಂತೆ ಕೇಳಿಕೊಂಡಿದೆ, ಆದರೆ ಇನ್ನೂ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ದೃಢಪಡಿಸಿವೆ.

"ಸಭೆಯ ಸ್ಥಳ ಢಾಕಾದಿಂದ ಬದಲಾದರೆ ಮಾತ್ರ ಏಷ್ಯಾ ಕಪ್ ನಡೆಯಬಹುದು. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸಭೆಗಾಗಿ ಭಾರತದ ಮೇಲೆ ಅನಗತ್ಯ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಸ್ಥಳವನ್ನು ಬದಲಾಯಿಸುವಂತೆ ನಾವು ಅವರನ್ನು ವಿನಂತಿಸಿದ್ದೇವೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೊಹ್ಸಿನ್ ನಖ್ವಿ ಢಾಕಾದಲ್ಲಿ ಸಭೆ ನಡೆಸಲು ಮುಂದಾದರೆ ಬಿಸಿಸಿಐ ಯಾವುದೇ ನಿರ್ಣಯವನ್ನ ಬಹಿಷ್ಕರಿಸುತ್ತದೆ" ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries