HEALTH TIPS

BitChat: ಇಂಟರ್‌ನೆಟ್, ವೈಫೈ ಇರದೆ ಬಳಸುವ ಹೊಸ ಮೆಸೆಂಜರ್ App ತಂದ ಜಾಕ್ ಡೋರ್ಸಿ

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟರ್‌ನ (ಇಂದಿನ ಎಕ್ಸ್‌) ಸಹ ಸ್ಥಾಪಕ ಜಾಕ್ ಡೋರ್ಸಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅದೂ ಕ್ರಾಂತಿಕಾರಿ ಎನ್ನಬಹುದಾದ ಹೆಜ್ಜೆಯೊಂದಿಗೆ.

ಇಂಟರ್‌ನೆಟ್ ಇಲ್ಲದೇ, ಸೆಟ್‌ಲೈಟ್ ಸಂಪರ್ಕ ಇಲ್ಲದೇ, ವೈಫೈನೂ ಇಲ್ಲದೇ ಕಾರ್ಯನಿರ್ವಹಿಸಬಹುದಾದ ಹೊಸ ಮೆಸೆಂಜರ್ ಆಯಪ್ ಒಂದನ್ನು ಡೋರ್ಸಿ ಅವರು ಅಭಿವೃದ್ಧಿಪಡಿಸಿರುವುದಾಗಿ ವರದಿಯಾಗಿದೆ.

ಬಿಟ್ ಚಾಟ್ (BitChat) ಎಂಬ ಪಿ2ಪಿ ಮೆಸೆಂಜರ್‌ ಆಯಪ್‌ ಅನ್ನು ಜಾಕ್ ಡೊರ್ಸಿ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಆಯಪ್ ಆಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್‌ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ.

ಬಿಟ್ ಚಾಟ್‌ ಟೆಸ್ಟ್‌ ಮೋಡ್‌ನಲ್ಲಿ ಹಲವರು ಚಾಟ್ ಮಾಡಿರುವ ಸ್ಕ್ರೀನ್ ಶಾಟ್‌ಗಳು ಆನ್‌ಲೈನ್‌ಲ್ಲಿ ಗಮನ ಸೆಳೆದಿವೆ. ಕ್ರಿಪ್ಟೊ ಕರೆನ್ಸಿ ಆಯಪ್‌ಗಳಲ್ಲಿ ಬಳಕೆಯಾಗುತ್ತಿದ್ದ ತಂತ್ರಜ್ಞಾನವ್ನೇ ಸುಧಾರಿಸಿ ಈ ಹೊಸ ಆಯಪ್ ತರಲಾಗಿದೆ ಎನ್ನಲಾಗಿದೆ.

ಮೊಬೈಲ್‌, ಇತರ ಡಿವೈಸ್‌ಗಳಲ್ಲಿನ ಬ್ಲೂಟೂತ್‌ ಮೂಲಕವೇ ಒಂದು ಸಾಧನದಿಂದ ಇನ್ನೊಂದು ಸಾಧನವನ್ನು ಪಿ2ಪಿ ನೆಟ್‌ವರ್ಕ್ ಮೂಲಕ ಇದು ಸಂಪರ್ಕ ಸಾಧಿಸುತ್ತದೆ ಎನ್ನಲಾಗಿದೆ.

2022 ರಲ್ಲಿ ಇಲಾನ್ ಮಸ್ಕ್ ಟ್ವಿಟರ್‌ ಅನ್ನು ಖರೀದಿಸಿದ ನಂತರ ಜಾಕ್ ಅಲ್ಲಿಂದ ಹೊರ ಬಿದ್ದಿದ್ದರು. ಅವರು ಈಗ ಅಭಿವೃದ್ಧಿಪಡಿಸಿರುವ ಬಿಟ್ ಚಾಟ್ ಯಶಸ್ವಿಯಾದರೇ ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿಯಾಗಲಿದೆ ಎನ್ನಲಾಗಿದೆ.

ಇಂಟರ್‌ನೆಟ್ ಇಲ್ಲದೇ, ಸೆಟ್‌ಲೈಟ್ ಸಂಪರ್ಕ ಇಲ್ಲದೇ, ವೈಫೈನೂ ಇಲ್ಲದೇ ಬಿಟ್ ಚಾಟ್ ಮೂಲಕ ಸುಲಭ ಸಂವಹನ ಸಾಧಿಸಬಹುದು ಎಂದು ಹೇಳಲಾಗಿದೆ. ಈ ಕುರಿತು ಹಲವು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries