HEALTH TIPS

ಜಲಾಂತರ್ಗಾಮಿ: ವಿಸ್ತೃತ ಶ್ರೇಣಿ ರಾಕೆಟ್‌ ವ್ಯವಸ್ಥೆ ಪರೀಕ್ಷೆ ಯಶಸ್ವಿ

ನವದೆಹಲಿ: ಜಲಾಂತರ್ಗಾಮಿಗಳ ಮೇಲಿನ ದಾಳಿಗೆ ಬಳಸುವ ಕ್ಷಿಪಣಿ ಗಳನ್ನು ಹೊಡೆದುರುಳಿಸಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ವಿಸ್ತೃತ ಶ್ರೇಣಿಯ ರಾಕೆಟ್‌ಗಳ ವ್ಯವಸ್ಥೆಯ (ಇಆರ್‌ಎಎಸ್‌ಆರ್‌) ಪರೀಕ್ಷೆ ಯಶಸ್ವಿಯಾಗಿದೆ. 

ಜೂನ್‌ 23ರಿಂದ ಜುಲೈ7ರವರೆಗೆ ಯುದ್ಧನೌಕೆ ಐಎನ್‌ಎಸ್‌ ಕವರತ್ತಿ ಮೂಲಕ ಭಾರತೀಯ ನೌಕಾಪಡೆಯು ಈ ಪರೀಕ್ಷೆ ನಡೆಸಿದೆ.

ಈ ರಾಕೆಟ್‌ ವ್ಯವಸ್ಥೆಯು ಭಾರತೀಯ ನೌಕಾಪಡೆಯ ಬಲ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಮಾಹಿತಿ ನೀಡಿದ್ದಾರೆ.

ವಿವಿಧ ಶ್ರೇಣಿಯ ಒಟ್ಟು 17 ಇಆರ್‌ಎಎಸ್‌ಆರ್‌ ರಾಕೆಟ್‌ಗಳನ್ನು ಪರೀಕ್ಷಿಸಲಾಗಿದ್ದು, ಡಿಆರ್‌ಡಿಒ ಇವುಗಳನ್ನು ಅಭಿವೃದ್ಧಿಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries