HEALTH TIPS

ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥರಿಗೆ ಪಾಕ್‍ನ ಅತ್ಯುನ್ನತ ಗೌರವ

ಇಸ್ಲಾಮಾಬಾದ್: ಅಮೆರಿಕದ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಕುರಿಲ್ಲಾಗೆ ಪಾಕಿಸ್ತಾನದ ಅತ್ಯುನ್ನತ ರಾಷ್ಟ್ರೀಯ ಗೌರವ `ನಿಷಾನ್ ಎ-ಇಮ್ತಿಯಾಝ್' ಅನ್ನು ಪ್ರದಾನ ಮಾಡಲಾಗಿದೆ.

ಪ್ರಾದೇಶಿಕ ಶಾಂತಿಗೆ ಉತ್ತೇಜನ ನೀಡುವಲ್ಲಿ ಹಾಗೂ ಅಮೆರಿಕ-ಪಾಕಿಸ್ತಾನ ಮಿಲಿಟರಿ ಸಂಬಂಧಗಳನ್ನು ವರ್ಧಿಸುವಲ್ಲಿ ಅವರ ಪಾತ್ರವನ್ನು ಪರಿಗಣಿಸಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ ಅವರು ಮೈಕೆಲ್ ಕುರಿಲ್ಲಾಗೆ ಗೌರವವನ್ನು ಪ್ರದಾನ ಮಾಡಿದರು.

ಇಸ್ಲಾಮಾಬಾದ್‍ ನ ಅಧ್ಯಕ್ಷರ ಭವನದಲ್ಲಿ ಕಾರ್ಯಕ್ರಮ ನಡೆಯಿತು. ಬಳಿಕ ಕುರಿಲ್ಲಾ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ| ಆಸಿಮ್ ಮುನೀರ್ ಸೇರಿದಂತೆ ಪಾಕಿಸ್ತಾನದ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರ ಜೊತೆ ಸಭೆ ನಡೆಸಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries