ಕೊಲ್ಲಂ: ಖಾಸಗಿ ಬಸ್ ಮುಷ್ಕರ ತಪ್ಪಿಸಲು ಬಸ್ ಮಾಲೀಕರೊಂದಿಗೆ ಚರ್ಚೆ ನಡೆಸುವುದಾಗಿ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ಹೇಳಿದ್ದಾರೆ. ಮೊದಲ ಹಂತದಲ್ಲಿ ಸಾರಿಗೆ ಆಯುಕ್ತರು ಚರ್ಚೆ ನಡೆಸಲಿದ್ದಾರೆ.
ಆ ಚರ್ಚೆ ವಿಫಲವಾದರೆ ಸಚಿವ ಮಟ್ಟದ ಚರ್ಚೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ವಿದ್ಯಾರ್ಥಿ ರಿಯಾಯಿತಿ ಹೆಚ್ಚಿಸುವುದು ಸೇರಿದಂತೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು 22 ರಿಂದ ರಾಜ್ಯದಲ್ಲಿ ಖಾಸಗಿ ಬಸ್ ಮುಷ್ಕರ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಅದರ ಭಾಗವಾಗಿ ಈ ತಿಂಗಳ 8 ರಂದು ಸಾಂಕೇತಿಕ ಮುಷ್ಕರ ನಡೆಸಲಾಗುವುದಾಗಿ ಘೋಷಿಸಲಾಗಿದೆ.
ವಿದ್ಯಾರ್ಥಿಗಳಿಗೆ ರಿಯಾಯಿತಿ ಟಿಕೆಟ್ ನೀಡಲು ಆ್ಯಪ್ ಆರಂಭಿಸಲಾಗುವುದು ಎಂದು ಸಚಿವ ಗಣೇಶ್ ಕುಮಾರ್ ತಿಳಿಸಿದ್ದಾರೆ. ಒಂದೂವರೆ ತಿಂಗಳೊಳಗೆ ಅ್ಯಪ್ ಆರಂಭಿಸಲು ನಿರ್ಧಾರ.
ಇದರೊಂದಿಗೆ, ವಿದ್ಯಾರ್ಥಿಗಳಿಗೆ ಮಾತ್ರ ರಿಯಾಯಿತಿಗಳು ಲಭಿಸಲಿದೆ. ಎಷ್ಟು ವಿದ್ಯಾರ್ಥಿಗಳು ರಿಯಾಯಿಗಳು ಲಭಿಸುತ್ತಿದೆ ಎಂಬುದನ್ನು ಪತ್ತೆಹಚ್ಚಲು ಈ ಅಪ್ಲಿಕೇಶನ್ ನಮಗೆ ಅವಕಾಶ ನೀಡುತ್ತದೆ ಎಂದು ಸಚಿವರು ಹೇಳಿದರು.





