ಕಾಸರಗೋಡು: ವಿಶ್ವ ಉರಗ ದಿನವನ್ನು ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಚರಿಸಲಾಯಿತು. ಕೇರಳ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗ ಮತ್ತು ಕಾಸರಗೋಡು ಅರಣ್ಯ ಕ್ಷಿಪ್ರ ಕಾರ್ಯಪಡೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭ 'ಪರಿಸರ ವ್ಯವಸ್ಥೆಯಲ್ಲಿ ಹಾವುಗಳ ಪ್ರಾಮುಖ್ಯತೆ' ವಿಷಯದ ಕುರಿತು ಶಾಲೆಯಲ್ಲಿ ಜಾಗೃತಿ ತರಗತಿಯನ್ನು ಆಯೋಜಿಸಲಾಗಿತ್ತು. 'ಹಾವುಗಳು ಮತ್ತು ಹಾವು ಕಡಿತಗಳು' ವಿಷಯದ ಕುರಿತು ಉರಗ ಸ್ವಯಂಸೇವಕ ಸುನಿಲ್ ಕೆ. ಸುರೇಂದ್ರನ್ ಜಾಗೃತಿ ತರಗತಿ ನಡೆಸಿದರು. ಕಾರ್ಯಕ್ರಮದ ಅಂಗವಾಗಿ, ಶಾಲೆಯ ಒಳಗೆ ಮತ್ತು ಸುತ್ತಮುತ್ತ ಹಾವುಗಳ ಉಪಸ್ಥಿತಿಯನ್ನು ಪರಿಶೀಲಿಸಲಾಯಿತು.
ಮುಳಿಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ವಿ. ಮಿನಿ ಸಮಾರಂಭ ಉದ್ಘಾಟಿಸಿದರು. ಉಪ ವಲಯ ಅರಣ್ಯಾಧಿಕಾರಿ ಎನ್.ವಿ. ಸತ್ಯನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಶಿಕ್ಷಕ ಕೆ.ನಾರಾಯಣನ್, ಪಿ.ಟಿ.ಎ. ಅಧ್ಯಕ್ಷ ಮಣಿಕಂಠನ್ ಓಂಪಾಯಿಲ್, ಸಿಬ್ಬಂದಿ ಕಾರ್ಯದರ್ಶಿ ಪಿ.ಎಂ. ರೋಸಮ್ಮ, ಹಿರಿಯ ಸಹಾಯಕಿ ಎ.ಪದ್ಮಿನಿ, ವಲಯ ಅರಣ್ಯಾಧಿಕಾರಿಗಳಾದ ಕೆ.ಆರ್. ವಿಜಯನಾಥ್, ಕೆ.ಜಯಕುಮಾರ್, ಪಿ.ಪ್ರವೀಣ್‍ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಬೀಟ್ ಅರಣ್ಯಾಧಿಕಾರಿಗಳಾದ ಎಂ.ಜೆ.ಅಂಜು, ಕೆ.ಸುಧೀಶ್, ಯು.ರವೀಂದ್ರನ್, ಕೆ.ಪಿ. ಅಭಿಲಾಷ್, ಲಿಜೋ ಸೆಬಾಸ್ಟಿಯನ್, ಉರಗ ಸ್ವಯಂಸೇವಕ ಅನೀಶ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಅರಣ್ಯ, ಪರಿಸರ ಕ್ಲಬ್, ವಿಜ್ಞಾನ ಕ್ಲಬ್, ಜೂನಿಯರ್ ರೆಡ್ ಕ್ರಾಸ್ ವಿಭಾಗದ ಸದಸ್ಯರು, ವಿದ್ಯಾರ್ಥಿಗಳು, ಕಾಸರಗೋಡು ಆರ್.ಆರ್.ಟಿ. ಅಧಿಕಾರಿಗಳು ಪಾಲ್ಗೊಂಡಿದ್ದರು. ಅರಣ್ಯಾಧಿಕಾರಿ ಕೆ.ಕೆ. ಬಾಲಕೃಷ್ಣನ್ ಸ್ವಾಗತಿಸಿದರು. ವಿಜ್ಞಾನ ಕ್ಲಬ್ ಸಂಯೋಜಕಿ ಎನ್. ಕೃಷ್ಣಪ್ರಿಯ ವಂದಿಸಿದರು.
- ಉರಗ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ಸುತ್ತಮುತ್ತಲ ಪ್ರದೇಶದಲ್ಲಿ ಹಾವುಗಳ ಇರುವಿಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಕ್ಷಿಪ್ರ ಪ್ರತಿಕ್ರಿಯೆ ತಂಡ ಪರಿಶೀಲಿಸಿದರು.





