ಪಾಲಕ್ಕಾಡ್: ರೈಲ್ವೆ ಹಳಿಗಳಲ್ಲಿ ಕಬ್ಬಿಣದ ಕ್ಲಿಪ್‍ಗಳು ಪತ್ತೆಯಾದ ಹಿಂದೆ ವಿಧ್ವಂಸಕ ಕೃತ್ಯದ ಪ್ರಯತ್ನ ನಡೆದಿರುವ ಶಂಕೆ ಇದೆ. ಪೋಲೀಸರು ತನಿಖೆ ಆರಂಭಿಸಿದ್ದಾರೆ.
ಒಟ್ಟಪಾಲಂ ಮತ್ತು ಲಕ್ಕಿಡಿ ರೈಲು ನಿಲ್ದಾಣಗಳ ನಡುವಿನ ಮಾಯನ್ನೂರ್ ಫ್ಲೈಓವರ್ ಬಳಿ ಐದು ಸ್ಥಳಗಳಲ್ಲಿ ಈ ಕ್ಲಿಪ್‍ಗಳು ಪತ್ತೆಯಾಗಿವೆ. ಅವು ಬಲವರ್ಧಿತ ಕಬ್ಬಿಣದಿಂದ ಮಾಡಲ್ಪಟ್ಟಿರುವುದರಿಂದ ಅಪಾಯವಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಪಾಲಕ್ಕಾಡ್ ಕಡೆಗೆ ಹಾದು ಹೋಗುತ್ತಿದ್ದ ಮೆಮು ನ ಲೋಕೋ ಪೈಲಟ್, ಹಳಿಯಲ್ಲಿ ಏನೋ ಅಸಾಮಾನ್ಯ ಅನುಭವವಾಗಿದೆ ಎಂದು ವರದಿ ಮಾಡಿದ್ದರು.
ನಂತರದ ತಪಾಸಣೆಯ ಸಮಯದಲ್ಲಿ, ಹಳಿ ಮತ್ತು ಕಾಂಕ್ರೀಟ್ ಸ್ಲೀಪರ್ ಅನ್ನು ಸಂಪರ್ಕಿಸುವ ಐದು ಇ.ಆರ್. ಕ್ಲಿಪ್‍ಗಳು ಕಂಡುಬಂದಿವೆ. ಆರ್‍ಪಿಎಫ್ ಮತ್ತು ಒಟ್ಟಪಾಲಂ ಪೋಲೀಸರು ಘಟನೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.






