ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಕ್ವಾ ಪ್ರಾಂತ್ಯದಲ್ಲಿ ಕ್ವಾಡ್‌ಕಾಪ್ಟರ್ ಉಡ್ಡಯನ ಮಾಡುತ್ತಿದ್ದ ವೇಳೆ ಬಾಂಬ್ ಸ್ಫೋಟಗೊಂಡ ಪರಿಣಾಮ, ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಕಮಾಂಡರ್ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ತಿರಾಹ್ ಕಣಿವೆಯಲ್ಲಿ ಕ್ವಾಡ್‌ಕಾಪ್ಟರ್ ಅನ್ನು ನಿರ್ವಹಣೆ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಂಬ್ ಬಿದ್ದು, ಕಮಾಂಡರ್ ಯಾಸೀನ್ ಅಲಿಯಾಸ್ ಅಬ್ದುಲ್ಲಾ ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಈ ವರ್ಷ ಮೇ 24ರಂದು ಯಾಸೀನ್ ಹಾಗೂ ಆತನ ತಂಡವು ಟಿಟಿಪಿಗೆ ಸೇರ್ಪಡೆಯಾಗಿತ್ತು.




