ಪಾಲಕ್ಕಾಡ್: ಪೆÇೀಲ್ಪುಲ್ಲಿಯಲ್ಲಿ ಮೊನ್ನೆ ಸಂಭವಿಸಿದ ಕಾರು ಸ್ಫೋಟದಲ್ಲಿ ಸುಟ್ಟು ಕರಕಲಾದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತರು ಸಹೋದರರಾದ ಎಮಿಲಿಯಾನಾ (4) ಮತ್ತು ಆಲ್ಫ್ರೆಡ್ (6). ಅವಘಡದಲ್ಲಿ ಸುಟ್ಟು ಕರಕಲಾದ ಅವರ ತಾಯಿ ಎಲ್ಸಿ ಮಾರ್ಟಿನ್ ಮತ್ತು ಸಹೋದರಿ ಅಲೀನಾ (10) ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಸಿಯ ಸ್ಥಿತಿ ಗಂಭೀರವಾಗಿದೆ.
ಪಾಲಕ್ಕಾಡ್‍ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಎಲ್ಸಿಯವರ ಪತಿ 55 ದಿನಗಳ ಹಿಂದೆ ಕ್ಯಾನ್ಸರ್‍ನಿಂದ ಸಾವನ್ನಪ್ಪಿದ್ದರು. ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಎಲ್ಸಿ, ಚಿಕಿತ್ಸೆಯ ಮರುದಿನ(ಗುರುವಾರ) ಕೆಲಸಕ್ಕೆ ಮರಳಿದ್ದರು.
ಶುಕ್ರವಾರ ಸಂಜೆ ಮನೆಗೆ ಮರಳಿದ್ದ ಎಲ್ಸಿ, ಹಿತ್ತಲಿನಲ್ಲಿ ಕಾರು ಸ್ಫೋಟಗೊಂಡಾಗ ತನ್ನ ಮಕ್ಕಳೊಂದಿಗೆ ಹೊರಗೆ ತೆರಳಲು ಸಿದ್ದತೆಯಲ್ಲಿದ್ದರು. ಬ್ಯಾಟರಿ ಶಾರ್ಟ್ ಸಕ್ರ್ಯೂಟ್‍ನಿಂದ ಕಾರು ಸ್ಫೋಟಗೊಂಡಿದೆ ಎಂಬುದು ಅಗ್ನಿಶಾಮಕ ಇಲಾಖೆಯ ಆರಂಭಿಕ ತೀರ್ಮಾನ. ಕುಟುಂಬದ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಸಚಿವ ಕೆ. ಕೃಷ್ಣನ್‍ಕುಟ್ಟಿ ಹೇಳಿರುವರು.


