HEALTH TIPS

ಬಾಹ್ಯಾಕಾಶದಲ್ಲಿ ಕಾಸ್ಮಿಕ್ ಗೂಬೆ ಗೋಚರ, ಅಚ್ಚರಿ ಸೆರೆ ಹಿಡಿದ ಟೆಲಿಸ್ಕೋಪ್

ಬಾಹ್ಯಾಕಾಶ ದಿಟ್ಟಿಸಿ ನೋಡಿದರೆ ಹಲವು ಕೌತುಗಳು ಪತ್ತೆಯಾಗುತ್ತದೆ. ಹೀಗಿರುವಾಗ ಪ್ರತಿ ದಿನ ಟೆಲಿಸ್ಕೋಪ್ ಮೂಲಕ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು, ಸಂಶೋಧಕರು ಹಲವು ಅಚ್ಚರಿಗಳನ್ನು ಪತ್ತೆ ಹಚ್ಚುತ್ತಾರೆ. ಇದೀಗ ಜೇಮ್ಸ್ ವೆಬ್ ಟೆಲಿಸ್ಕೋಪ್ ಇದೇ ರೀತಿಯ ಅಚ್ಚರಿಯೊಂದನ್ನು ಸೆರೆ ಹಿಡಿದಿದೆ.

ಬರೋಬ್ಬರಿ 11 ಶತಕೋಟಿ ಜ್ಯೂತಿವರ್ಷಗಳಷ್ಟು ದೂರದಲ್ಲಿರುವ ಬ್ರಹ್ಮಾಂಡ ಗೂಬೆಯನ್ನು ಟೆಲಿಸ್ಕೋಪ್ ಸೆರೆ ಹಿಡಿದಿದೆ. ಗೂಬೆ ಆಕಾರದಲ್ಲಿರುವ ಈ ವಿಚಿತ್ರದ ರಹಸ್ಯವೇನು ಅನ್ನೋದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ಏಲಿಯನ್ ಪತ್ತೆ ಸೇರಿದಂತೆ ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು. ಆದರೆ ವಿಜ್ಞಾನಿಗಳು ಇದರ ಹಿಂದಿನ ರಹಸ್ಯ ಬಹಿರಂಗಪಡಿಸಿದ್ದಾರೆ.

ಅಪರೂಪ ನಕ್ಷತ್ರಪುಂಜಗಳ ಡಿಕ್ಕಿ

11 ಶತಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿರುವ ಅಪರೂಪದ ಎರಡು-ಉಂಗುರಗಳ ನಕ್ಷತ್ರಪುಂಜಗಳ ಡಿಕ್ಕಿಯನ್ನು ಗುರುತಿಸಿದೆ, ಇದು ಗೂಬೆ ಮುಖವ್ನು ಹೋಲುತ್ತಿರುವ ಕಾರಣ ಇದಕ್ಕೆ ಕಾಸ್ಮಿಕ್ ಗೂಬೆ ಎಂದು ಹೆಸರಿಡಲಾಗಿದೆ. ಇದು ಎರಡು ಅಸಾಮಾನ್ಯ ನಕ್ಷತ್ರಪುಂಜಗಳ ನಡುವಿನ ಅಪರೂಪದ ಡಿಕ್ಕಿಯ ಪರಿಣಾಮವಾಗಿದೆ. ನಕ್ಷತ್ರ ಪುಂಜಗಳು ತಮ್ಮಚಲನೆಯಲ್ಲಿ ಸಂಭವಿಸುವ ಡಿಕ್ಕಿ ಅಥಾ ಸಮೀಪಿಸುವಾಗ ಸಂಭಿಸುವ ವಿಸ್ಮಯವೇ ಈ ಕಾಸ್ಮಿಕ್ ಗೂಬೆ. ಇಲ್ಲಿ ನಕ್ಷತ್ರ ಪುಂಜಗಳು ಎರಡು ಹೊಳೆಯುವ ಕಣ್ಣುಗಳು ಮತ್ತು ಚೂಪಾದ ಕೊಕ್ಕನ್ನು ಹೊಂದಿರುವ ಗೂಬೆಯ ಮುಖದಂತೆ ಕಾಣುವ ರಚನೆಯನ್ನು ಸೃಷ್ಟಿಸಿದೆ.

ಉಂಗುರ ನಕ್ಷತ್ರಪುಂಜ

ಹೆಚ್ಚಿನ ನಕ್ಷತ್ರಪುಂಜಗಳು ಕ್ಷೀರಪಥದಂತೆ ಸುರುಳಿಗಳಾಗಿವೆ. ಪ್ರತಿ ನಕ್ಷತ್ರಗಳು ನಿಯಮಿತ ಆಕಾರಗಳನ್ನು ಹೊಂದಿವೆ. ಆದರೆ ಉಂಗುರ ನಕ್ಷತ್ರಪುಂಜಗಳು ಬಹಳ ಅಪರೂಪ. ಚಿಕ್ಕ ನಕ್ಷತ್ರಪುಂಜವು ದೊಡ್ಡದರ ಮೂಲಕ ಅಪ್ಪಳಿಸಿದಾಗ ಅವು ರೂಪುಗೊಳ್ಳುತ್ತವೆ. ಈ ವೇಳೆ ಸಭೆಯು ಅನಿಲ ಮತ್ತು ನಕ್ಷತ್ರಗಳನ್ನು ಕೇಂದ್ರೀಯ ಕೋರ್ ಸುತ್ತಲೂ ಉಂಗುರಕ್ಕೆ ತಳ್ಳುತ್ತದೆ. ತಿಳಿದಿರುವ ಎಲ್ಲಾ ನಕ್ಷತ್ರಪುಂಜಗಳಲ್ಲಿ ಕೇವಲ 0.01% ಮಾತ್ರ ಉಂಗುರ ನಕ್ಷತ್ರಪುಂಜಗಳಾಗಿವೆ. ಎರಡು ಉಂಗುರ ನಕ್ಷತ್ರಪುಂಜಗಳ ಡಿಕ್ಕಿ ಯಾಗುವ ಮೂಲಕ ಅಪರೂಪ ಮತ್ತು ಕಾಸ್ಮಿಕ್ ಗೂಬೆಯನ್ನು ಸೃಷ್ಟಿಸಿದೆ.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries