ತಿರುವನಂತಪುರಂ: ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ನೆಯ್ಯಾಟಿಂಗರ ಮರುತತ್ತೂರು ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ಸ್ಥಾಪಿಸಲಾದ ಮಹಾಲಕ್ಷ್ಮಿ ಸಾಹಿತ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಸಾಹಿತ್ಯ ಕ್ಷೇತ್ರಕ್ಕೆ ಅವರ ಸಮಗ್ರ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜು.6ರಂದು ಸಂಜೆ 5 ಗಂಟೆಗೆ ಮರುತತ್ತೂರು ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ತಿರುವಾಂಕೂರು ರಾಜಮನೆತನದ ಸದಸ್ಯೆ ಗೌರಿ ಪಾರ್ವತಿ ಬಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ವಿಜೇತರನ್ನು ಡಾ. ವೆಂಗನೂರು ಬಾಲಕೃಷ್ಣನ್, ಸಂತೋಷ್ ರಾಜಶೇಖರನ್ ಮತ್ತು ಬಿ.ಎಸ್. ರಾಜೇಶ್ ತಂಡ ಆಯ್ಕೆ ಮಾಡಿದೆ.





